ರಕ್ಷಿತಾ ಪ್ರೇಮ್ ಸಹೋದರ ರಾಣ ನಟನೆಯ ‘ಏಕ್ ಲವ್ ಯಾ’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಎಡವಟ್ಟೊಂದು ಸಂಭವಿಸಿತ್ತು. ಹಾಡು ಬಿಡುಗಡೆ ಮಾಡುವಾಗ ಬಾಟಲ್ ಒಂದು ಓಪನ್ ಮಾಡಲಾಗಿತ್ತು. ಇದೀಗ ಎಲ್ಲೆಡೆ ಇದು ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಪುನೀತ್ ಫೋಟೋ ಇರಿಸಿ ನಮನ ಸಲ್ಲಿಸಲಾಗಿತ್ತು. ಬಳಿಕ ಹಾಡು ಬಿಡುಗಡೆ ಮಾಡುವಾಗ ಬಾಟಲ್ ಒಂದು ಓಪನ್ ಮಾಡಲಾಗಿತ್ತು. ಇದು ಶಾಂಪೇನ್ ಬಾಟಲಿ ಏಂದೇ ಹೇಳಲಾಗಿತ್ತು.
ಆ ಬಗ್ಗೆ ರಕ್ಷಿತಾ ಪ್ರೇಮ್ ಪ್ರತಿಕ್ರಿಯೆ ನೀಡಿದ್ದು, ಪುನೀತ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಜತೆಗೆ ಅದು ಶಾಂಪೇನ್ ಬಾಟಲಿ ಆಗಿರಲಿಲ್ಲ ಎಂದಿದ್ದಾರೆ.
‘ಅದು ನಿಜವಾಗಲೂ ಶಾಂಪೇನ್ ಬಾಟಲಿ ಆಗಿರಲಿಲ್ಲ. ಅದು ನಾನ್ ಆಲ್ಕೋಹಾಲಿಕ್ ಬಾಟಲಿ. ತಪ್ಪಾಗಿ ಸಂದೇಶ ಹೋಗಿದೆ. ಪುನೀತ್ ಅಭಿಮಾನಿಗಳಿಗೆ ನೋವಾಗಿದೆ. ಆ ಬಗ್ಗೆ ನಾವು ಕ್ಷಮೆ ಕೇಳುತ್ತೇವೆ’ ಎಂದಿದ್ದಾರೆ . ಪ್ರೇಮ್ ಅವರು ‘ಏಕ್ ಲವ್ ಯಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.