ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪಾರ್ಟಿ ಆರೋಪದಡಿ ಬಂಧಿಸಪಟ್ಟಿದ್ದು, ಇದೀಗ ಮುಂಬೈನ ಕಿಲ್ಲಾ ನ್ಯಾಯಾಲಯ ಅಕ್ಟೊಬರ್ 4 (ನಾಳೆ) ವರೆಗೆ ಎನ್ಸಿಬಿ ಕಸ್ಟಡಿಗೆ ನೀಡಿದೆ.
ಆರ್ಯನ್ ಸೇರಿದಂತೆ ಇನ್ನಿಬ್ಬರನ್ನು ಇಂದು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದು, ಬಳಿಕ ನ್ಯಾಯಾಲಕ್ಕೆ ಹಾಜರು ಪಡಿಸಿದ ಎನ್ಸಿಬಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿ ನೀಡುವಂತೆ ಮನವಿ ಮಾಡಿತು .
ಈ ಹಿನ್ನೆಲೆ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಎನ್ಸಿಬಿ ಅಧಿಕಾರಿಗಳ ಕಸ್ಟಡಿಗೆ ಮೂವರು ಆರೋಪಿಗಳನ್ನು ನೀಡಿದ್ದಾರೆ.