News Karnataka Kannada
Wednesday, May 01 2024
ದೇಶ

2 ಡೋಸ್‌ ಲಸಿಕೆ ಪಡೆದುಕೊಂಡವರಲ್ಲಿ ಕೊರೋನಾ ಸೋಂಕು ಪತ್ತೆ

Vaccine
Photo Credit :

ನವದೆಹಲಿ : 2 ಡೋಸ್‌ ಲಸಿಕೆಯನ್ನು ಪೂರ್ಣಗೊಳಿಸಿದ ಹೊರತಾಗಿಯೂ ದೇಶದಲ್ಲಿ 87,000 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ. ಇವರಲ್ಲಿ ಶೇ.46ರಷ್ಟುಮಂದಿ ಕೇರಳದವರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ಕೇರಳದಲ್ಲಿ ಮೊದಲ ಡೋಸ್‌ ಪಡೆದವರ ಪೈಕಿ 80,000 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರೆ, 2 ಡೋಸ್‌ ಪಡೆದ ಸುಮಾರು 40,000 ಮಂದಿಯಲ್ಲಿ ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿವೆ. ದೈನಂದಿನ ಕೋವಿಡ್‌ ಪ್ರಕರಣಗಳಲ್ಲಿ ಲಸಿಕೆ ಪಡೆದುಕೊಂಡವರಲ್ಲಿ ಸೋಂಕು ಪತ್ತೆ ಆಗುತ್ತಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಆತಂಕಕ್ಕೆ ಕಾರಣವಾಗಿದೆ.

ಅದರಲ್ಲೂ ಶೇ.100ರಷ್ಟುಲಸಿಕೆ ನೀಡಿಕೆ ದರವನ್ನು ಹೊಂದಿರುವ ವಯನಾಡ್‌ನಲ್ಲಿಯೂ ಇಂತಹ ಪ್ರಕರಣಗಳು ದಾಖಲಾಗುತ್ತಿವೆ. ಲಸಿಕೆ ಪಡೆದ ಬಳಿಕ ಸೋಂಕು ಕಾಣಿಸಿಕೊಂಡ 200 ಮಾದರಿಗಳನ್ನು ಜಿನೋಮ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಕೇರಳದ ಗಡಿ ಜಿಲ್ಲೆಗಳಾದ ಕರ್ನಾಟಕ ಮತ್ತು ತಮಿಳುನಾಡಿನ ಮೇಲೂ ಕೇಂದ್ರ ಸರ್ಕಾರ ತೀವ್ರ ನಿಗಾ ವಹಿಸಿದೆ. ಈ ರಾಜ್ಯಗಳಲ್ಲಿ ಜಿನೋಮ್‌ ಮಾದರಿ ಪರೀಕ್ಷೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು