ಗುಜರಾತ್ : ಇಂದು ಗುಜರಾತ್ನ ಗಾಂಧಿನಗರ ಮಹಾನಗರ ಪಾಲಿಕೆಯ 11 ವಾರ್ಡ್ಗಳಲ್ಲಿ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.
ಹೀರಾಬೆನ್ ಅವರಿಗೆ ಮತಗಟ್ಟೆಯಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಅವರ ಜೊತೆ ಕುಟುಂಬದವರೂ ಸಹ ಇದ್ದರು. ಗಾಂಧಿನಗರ ಮಹಾನಗರ ಪಾಲಿಕೆಯ ಚುನಾವಣೆ ಏಪ್ರಿಲ್ನಲ್ಲಿಯೇ ನಡೆಯಬೇಕಿತ್ತು. ಆದರೆ ಕೊವಿಡ್ 19 ಹಿನ್ನೆಲೆ ಚುನಾವಣೆಯನ್ನು ಮುಂದೂಡಲಾಗಿತ್ತು.
ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಸಂಜೆ 6ಗಂಟೆವರೆಗೆ ನಡೆಯಲಿದೆ. ಇದರ ಫಲಿತಾಂಶ ಅಕ್ಟೋಬರ್ 5ರಂದು ಪ್ರಕಟವಾಗಲಿದೆ.