ದೆಹಲಿ : ಕೇಂದ್ರ ದೆಹಲಿಯಲ್ಲಿ ಕಟ್ಟಡದ ಎರಡನೇ ಮಹಡಿಯಿಂದ ಕೋತಿಯೊಂದು ಇಟ್ಟಿಗೆ ನೆಲಕ್ಕೆ ಎಸೆದಿದ್ದು, ಕೆಳಗಿದ್ದ ವ್ಯಕ್ತಿ ತಲೆ ಮೇಲೆ ಇಟ್ಟಿಗೆ ಬಿದ್ದು ಮೃತಪಟ್ಟಿದ್ದಾರೆ.
ನಬಿ ಕರೀಮ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮೊಹಮ್ಮದ್ ಕುರ್ಬಾನ್ ತಲೆಗೆ ಬಿದ್ದ ಪೆಟ್ಟಿನಿಂದ ಮೃತಪಟ್ಟಿದ್ದಾರೆ. ಮೊಹಮ್ಮದ್ ತಕ್ಷಣವೇ ಕುಸಿದುಬಿದ್ದಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕರೆತರುವ ಮುನ್ನವೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಓಂ ಪ್ರಕಾಶ್ ಮಿಶ್ರಾ ಎನ್ನುವವರು ಮನೆಯ ಟ್ಯಾಂಕ್ ಮೇಲೆ ಎರಡು ಇಟ್ಟಿಗೆಯನ್ನು ಇರಿಸಿದ್ದರು. ಕೋತಿಗಳು ಟ್ಯಾಂಕ್ ಮುಚ್ಚುಳ ತೆಗೆದು ಗಲೀಜು ಮಾಡಬಾರದು ಎನ್ನುವುದು ಇವರ ಉದ್ದೇಶವಾಗಿತ್ತು. ಇದೇ ಇಟ್ಟಿಗೆಯನ್ನು ಕೋತಿ ತೆಗೆದು ಕೆಳಕ್ಕೆ ಬಿಸಾಡಿದೆ.