News Karnataka Kannada
Friday, May 03 2024
ಛತ್ತೀಸಗಢ

ಛತ್ತೀಸ್‌ಗಢ: ಪತ್ನಿಗೆ ಫೋನ್‌ ಮೂಲಕ ʻತಲಾಖ್ʼ ಹೇಳಿದ ಪತಿ!

Kundapur: BJP agent caught with mobile phone tied to his leg
Photo Credit :

ಜಶ್ಪುರ್ (ಛತ್ತೀಸ್‌ಗಢ): ಮಗುವಿಗೆ ಜನ್ಮ ನೀಡದ ಕಾರಣ ಛತ್ತೀಸ್‌ಗಢದ ಮಹಿಳೆಗೆ ಆಕೆಯ ಪತಿ ಫೋನ್ ಮೂಲಕ ‘ತ್ರಿವಳಿ ತಲಾಖ್’ ನೀಡಿರುವ ಘಟನೆ ನಡೆದಿದ್ದು, ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಿಳೆಯ ದೂರಿನ ಆಧಾರದ ಮೇರೆಗೆ ಪತಿಯ ವಿರುದ್ಧ ಛತ್ತೀಸ್‌ಗಢದ ಜಶ್‌ಪುರದ ಕುಂಕುರಿ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019 ರ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಬ್ಬರು ಜಾರ್ಖಂಡ್‌ನ ಬಲುಮತ್‌ನ ಇಶ್ತಿಯಾಕ್ ಆಲಂ ಅವರನ್ನು 2007 ರಲ್ಲಿ ವಿವಾಹವಾದರು. ಕೆಲವು ದಿನಗಳ ನಂತರ ʻಇಷ್ಟು ದಿನವಾದ್ರೂ ನೀನು ಮಗುವಿಗೆ ಜನ್ಮ ನೀಡಿಲ್ಲʼ ಎಂದು ಚಿತ್ರಹಿಂಸೆಗೊಳಗಾಗಿದ್ದರು. ಹೀಗಾಗಿ ಆಕೆ ಅವರು ಸ್ವಲ್ಪ ಸಮಯದವರೆಗೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ಬಳಿಕ ನನ್ನನ್ನು ಮರಳಿ ಮನೆಗೆ ಕರೆದುಕೊಂಡು ಹೋಗುವಂತೆ ಪತಿಗೆ ಕರೆ ಮಾಡಿದಾಗ, ಆತ ತಲಾಖ್ ಎಂದು ಹೇಳಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯು ಪತ್ನಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದು, ಬೇರೆ ಹುಡುಗಿಯನ್ನು ಕೂಡ ಮದುವೆಯಾಗಿದ್ದಾನೆ ಎಂದಿದ್ದಾರೆ.

ಮುಸ್ಲಿಂ ಮಹಿಳೆಯರ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ- 2019 ಜುಲೈ 2019 ರಲ್ಲಿ ಸಂಸತ್ತು ಅಂಗೀಕರಿಸಲ್ಪಟ್ಟಿತು. ಮುಸ್ಲಿಮರಲ್ಲಿ ‘ತ್ರಿವಳಿ ತಲಾಖ್’ ಎಂದು ಕರೆಯಲ್ಪಡುವ ಮೂಲಕ ತ್ವರಿತ ವಿಚ್ಛೇದನದ ಅಭ್ಯಾಸವನ್ನು ಶಿಕ್ಷಾರ್ಹ ಅಪರಾಧವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು