News Karnataka Kannada
Monday, May 06 2024
ಛತ್ತೀಸಗಢ

ಛತ್ತೀಸ್‌ಗಢ: ಕಿಡ್ನಿ ಸ್ಟೋನ್ ತೆಗೆಯುವ ಬದಲು ರೋಗಿಯ ಕಿಡ್ನಿಯನ್ನೇ ತೆಗೆದ ನಕಲಿ ವೈದ್ಯರು

Doctors
Photo Credit : IANS

ಛತ್ತೀಸ್‌ಗಢ :‌ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 10 ವರ್ಷಗಳ ಹಿಂದೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡು ಚಿಕಿತ್ಸೆಗೆ ತೆರಳಿದ್ದ ಯುವಕನ ಕಿಡ್ನಿಯನ್ನೇ ತೆಗೆದಿರುವ ಸುದ್ದಿ ಇದೀಗ ಬಯಲಾಗಿದೆ.

ಚಿಕಿತ್ಸೆಯ ಹತ್ತು ವರ್ಷಗಳ ನಂತರ, ಯುವಕನಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಆತ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ವೇಳೆ ಸತ್ಯ ಬಯಲಾಗಿದೆ. ತನ್ನ ಒಂದು ಮೂತ್ರಪಿಂಡವನ್ನು ತೆಗೆದುಹಾಕಲಾಗಿದೆ ಎಂದು ತಿಳಿದ ಯುವಕನಿಗೆ ಆಘಾತವಾಗಿದೆ.

ಆರೋಪಿ ವೈದ್ಯರ ವಿರುದ್ಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ ಆರೋಪಿ ವೈದ್ಯನ ಪದವಿ ಸುಳ್ಳು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಂತೋಷ್ ಗುಪ್ತಾ ಹತ್ತು ವರ್ಷಗಳ ಹಿಂದೆ ಕಿಡ್ನಿಯಲ್ಲಿನ ಕಲ್ಲುಗಳಿಗೆ ಕೊರ್ಬಾದ ರಾಜ್‌ಗಮರ್ ರಸ್ತೆಯಲ್ಲಿರುವ ಸೃಷ್ಟಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನ ವೈದ್ಯರು ಚಿಕಿತ್ಸೆ ನೀಡಿದ್ದರು.

ಆದರೆ, ವೈದ್ಯರು ಕಿಡ್ನಿ ಸ್ಟೋನ್ ತೆಗೆಯುವ ಬದಲು ಅವರ ಒಂದು ಕಿಡ್ನಿ ತೆಗೆದಿದ್ದಾರೆ. ಇದೀಗ ಸಂತ್ರಸ್ತ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ದೂರು ಮಾನ್ಯವಾಗಿದೆ ಎಂದು ತಿಳಿದುಬಂದಿದೆ. ನಂತರ ಪೊಲೀಸರು ನಕಲಿ ವೈದ್ಯರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ನಡುವೆ ರಾಂಪುರ ಚೌಕಿ ಪೊಲೀಸರು ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು