ಪಾಟ್ನಾ: ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಹಾಡಹಗಲೇ ವ್ಯಕ್ತಿಗಳ ಗುಂಪೊಂದು ದಂಪತಿಗೆ ಅಮಾನುಷವಾಗಿ ದೊಣ್ಣೆಯಿಂದ ಥಳಿಸಿದ ಘಟನೆ ನಡೆದಿದೆ.
ಗುರುವಾರ ನಡೆದ ಈ ಘಟನೆಯ ವಿಡಿಯೋವನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ, ದಂಪತಿಗಳು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡ ಪುರುಷರ ಗುಂಪು, ಪುರುಷ ಮತ್ತು ಮಹಿಳೆಯನ್ನು ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದು. ಸ್ವಲ್ಪ ಸಮಯದ ನಂತರ, ಈ ಗುಂಪಿನಲ್ಲಿ ಇದ್ದವರು ದಂಪತಿಗೆ ಕೋಲುಗಳನ್ನು ಕೊಟ್ಟು ಪರಸ್ಪರ ಹೊಡೆದು ಕೊಳ್ಳಲು ಹೇಳಿದ್ದಾರೆ. ಶುಕ್ರವಾರ, ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) “ಬಿಹಾರದಲ್ಲಿ ಪುರುಷರ ಗುಂಪೊಂದು ಮಹಿಳೆಯನ್ನು ಥಳಿಸಿದ ಘಟನೆಯ ಬಗ್ಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದೆ.