News Karnataka Kannada
Monday, April 29 2024
ಬಿಹಾರ

ಪಾಟ್ನಾ: ಮರಳು ಮಾಫಿಯಾ ತಂಡದಿಂದ ಮಹಿಳಾ ಅಧಿಕಾರಿ ಮೇಲೆ ಹಲ್ಲೆ

Woman officer attacked by sand mafia gang
Photo Credit : News Kannada

ಪಾಟ್ನಾ: ಬಿಹಾರದ ಪಾಟ್ನಾ ಜಿಲ್ಲೆಯ ಸೋನೆ ನದಿಯ ದಡದಲ್ಲಿ ಮರಳು ಮಾಫಿಯಾ ತಂಡದವರು ಗಣಿ ಇಲಾಖೆ ತಂಡದ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ ಮಹಿಳಾ ಗಣಿ ಇನ್ಸ್‌ಪೆಕ್ಟರ್‌ನ್ನು ಅಮಾನುಷವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರೇವ್ ಗ್ರಾಮದ ಬಳಿ ಮರಳು ಮಾಫಿಯಾ ಸದಸ್ಯರು ಅಕ್ರಮವಾಗಿ ಟ್ರಕ್‌ಗಳಿಗೆ ಮರಳು ಲೋಡ್‌ ಮಾಡುತ್ತಿರುವಾಗ ಗಣಿ ಇಲಾಖೆ ಮತ್ತು ಬಿಹಾರ ಪೊಲೀಸರ ತಂಡ ದಾಳಿ ನಡೆಸಿದೆ.

ಆದರೆ, ಮರಳು ಮಾಫಿಯಾ ಸದಸ್ಯರು ಹಾಗೂ ಲಾರಿ ಚಾಲಕರು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಗಣಿ ಅಧಿಕಾರಿಗಳು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆದರೆ ಮಹಿಳಾ ಗಣಿ ಅಧಿಕಾರಿ ಈ ಸಂದರ್ಭ ಕೆಳಕ್ಕುರುಳಿದರು.

ಈ ವೇಳೆ ಆಕೆಯನ್ನು ಮಾಫಿಯಾ ತಂಡದವರು ಥಳಿಸಿದ್ದಾರೆ. ಕೂಡಲೇ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಫಿಯಾ ಸದಸ್ಯರನ್ನು ಓಡಿಸಿದ್ದಾರೆ. ಅಲ್ಲದೆ ಪಾಟ್ನಾ ಪೊಲೀಸರು ದಾಳಿಗೆ ಸಂಬಂಧಿಸಿದಂತೆ 44 ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು