News Karnataka Kannada
Tuesday, April 30 2024
ಬಿಹಾರ

ಬಿಹಾರ: ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ‘ಝಡ್ ಪ್ಲಸ್’ ಭದ್ರತೆ

Bihar Deputy CM Tejashwi Yadav
Photo Credit : News Kannada

ಬಿಹಾರ: ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ‘ಝಡ್ ಪ್ಲಸ್’ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ಅಧಿಕಾರಿಗಳು ಸುತ್ತೋಲೆ ಹೊರಡಿಸಲಾಗಿದ್ದು, ಆರ್‌ಜೆಡಿ ನಾಯಕ, ಡಿಸಿಎಂ ತೇಜಸ್ವಿ ಯಾದವ್ ಭದ್ರತೆಯಲ್ಲಿ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್(ಬಿಎಸ್‌ಎಪಿ) ಕಮಾಂಡೋಗಳು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಹಾರ ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ಕಳುಹಿಸಲಾದ ಸುತ್ತೋಲೆಯಲ್ಲಿ, ‘ತೇಜಸ್ವಿ ಯಾದವ್‌ಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ನಿರ್ಧಾರವನ್ನು ರಾಜ್ಯ ಭದ್ರತಾ ಸಮಿತಿ ತೆಗೆದುಕೊಂಡಿದೆ’ ಎಂದು ಹೇಳಲಾಗಿದೆ.

ತೇಜಸ್ವಿ ಯಾದವ್ ಅವರಿಗೆ ಬುಲೆಟ್ ಪ್ರೂಫ್ ಕಾರನ್ನೂ ಒದಗಿಸಲಾಗಿದೆ. ರಾಜ್ಯಪಾಲ ಫಾಗು ಚೌಹಾಣ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ‘ಝಡ್ ಪ್ಲಸ್’ ಭದ್ರತೆ ಒದಗಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು