ಬೆಂಗಳೂರು: ಬೆಂಗಳೂರು ಮೂಲದ ಎಜುಕೇಶನ್ ಟೆಕ್ ಕಂಪನಿ ಬೈಜುಸ್ ಸಂಕಷ್ಟ ಹೆಚ್ಚಾಗಿದೆ. ಉದ್ಯೋಗ ಕಡಿತ, ಇರುವ ಉದ್ಯೋಗಿಗಳ ಮೇಲೆ ಅತೀಯಾದ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಅನ್ನೋ ಆರೋಪಗಳ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ಬಹಿರಂಗವಾಗಿದೆ.
ಬೈಜುಸ್ ಇದೀಗ ತನ್ನ ಉದ್ಯೋಗಿಗಳಿಗೆ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡಿಸುತ್ತಿದ್ದಾರೆ. ಈ ಕುರಿತು ಮಹಿಳಾ ಉದ್ಯೋಗಿಯೊಬ್ಬರು ತಮಗಾಗಿರುವ ಅನ್ಯಾಯ ಹಾಗೂ ಅಸಹಾಯಕತೆಯನ್ನು ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ. ಉದ್ಯೋಗಿಗೆ ಕರೆ ಮಾಡಿ ಜುಲೈ 28ರೊಳಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ರಾಜೀನಾಮೆ ನೀಡಿದಿದ್ದರೆ ಈಗಾಗಲೇ ಕೆಲಸ ಮಾಡಿರುವ ವೇತನ, ಇನ್ಸೆಂಟೀವ್ ಸೇರಿದಂತೆ ಯಾವುದೇ ಸೆಟ್ಲಮೆಂಟ್ ಹಣ ಸ್ಥಗಿತಗೊಳಿಸಲಾಗುವುದು ಎಂದು ಬೆದರಿಕೆ ಹಾಕಿದ ಘಟನೆಯನ್ನು ಮಹಿಳಾ ಉದ್ಯೋಗಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದಾರೆ.
ಅಕಾಂಶ ಖೇಮಾ ಅನ್ನೋ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಬೈಜುಸ್ ಮೀಟಿಂಗ್ನಲ್ಲಿ ರಾಜೀನಾಮೆ ನೀಡಬೇಕು ಎಂದು ನನಗೆ ಸೂಚಿಸಿದ್ದಾರೆ. ಜುಲೈ 28ರೊಳಗೆ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಆಗಸ್ಟ್ 1ಕ್ಕ ನಿಮ್ಮ ಸ್ಯಾಲರಿ ಕ್ರೆಟಿಡ್ ಆಗುವುದಿಲ್ಲ. ಇಷ್ಟೇ ಅಲ್ಲ ಇನ್ಸೆಂಟೀವ್ ಸೇರಿದಂತೆ ಯಾವುದೇ ಸೆಟ್ಲ್ಮೆಂಟ್ ಕೂಡ ಇರುವುದಿಲ್ಲ ಎಂದು ಮಹಿಳಾ ಉದ್ಯೋಗಿಗೆ ಸೂಚಿಸಲಾಗಿದೆ.
ಏಕಾಏಕಿ ರಾಜೀನಾಮೆ ನೀಡುವಂತೆ ಘೋಷಣೆ ಮಾಡಿದರೆ ನಾವೇನು ಮಾಡುವುದು ಎಂದು ಮಹಿಳಾ ಉದ್ಯೋಗಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
@PMOIndia @BYJUS @rashtrapatibhvn @ClassTechTips @tweetdivya @shahbhartiya @ByjuRaveendran I want Indian govt please help me and other employee today due to byjus I want to end my life thier is no option plzz help plzz byjus pay my salary my variable pay please share @LinkedIn pic.twitter.com/VJowHZSeSq
— Akansha Khemka (@KhemkaAkansha) July 26, 2023