News Karnataka Kannada
Tuesday, May 07 2024
ಅಸ್ಸಾಂ

ಸಿಲ್ಚಾರ್: ಅಸ್ಸಾಂನಲ್ಲಿ ಮೂವರು ಗಾಂಜಾ ಕಳ್ಳಸಾಗಣೆದಾರರ ಬಂಧನ

Attempt to sell ganja near Guruvayanakere school: Two arrested
Photo Credit : Pixabay

ಸಿಲ್ಚಾರ್: ಅಸ್ಸಾಂನ ಸಿಲ್ಚಾರ್ ಪಟ್ಟಣದಲ್ಲಿ  ಮೂವರು ಗಾಂಜಾ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದ್ದು, ಅವರ ಬಳಿಯಿಂದ 50 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತರನ್ನು ಪಾಟ್ನಾ ಮೂಲದ ಸಿಕಂದರ್ ಕುಮಾರ್, ಧರ್ಮೇಂದ್ರ ಕುಮಾರ್ ಮತ್ತು ಅರ್ಮಾನ್ ಸೆಮೈ ಎಂದು ಗುರುತಿಸಲಾಗಿದೆ.

ಈ ಮೂವರು ಪಟ್ಟಣದ ತಾರಾಪುರ ಪ್ರದೇಶದ ಫ್ಲೈಓವರ್ ಪಕ್ಕದ ಹನುಮಾನ್ ದೇವಾಲಯದ ಬಳಿ ತಿರುಗಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಈ ಪ್ರದೇಶದಲ್ಲಿ ಇರುವ ಬಗ್ಗೆ ಸುಳಿವು ನೀಡಿದ ನಂತರ ಬಿಎಸ್ಎಫ್ ಗುಪ್ತಚರ ವಿಭಾಗ ಮತ್ತು ಪೊಲೀಸರು ಕಳ್ಳಸಾಗಣೆದಾರರನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದರು.

ಅವರಿಂದ ವಶಪಡಿಸಿಕೊಳ್ಳಲಾದ ಗಾಂಜಾವನ್ನು ೩೬ ಪ್ಯಾಕೆಟ್ ಗಳಲ್ಲಿ ಸುತ್ತಲಾಗಿತ್ತು. ಪೊಲೀಸರ ಪ್ರಕಾರ, ಅವರು ಅಗರ್ತಲಾದಿಂದ ರೈಲಿನಲ್ಲಿ ಗಾಂಜಾವನ್ನು ತಂದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು