News Karnataka Kannada
Monday, May 06 2024
ಅಸ್ಸಾಂ

ದುಬೈನಲ್ಲಿ ಕಳುವಾಗಿದ್ದ 20 ಲಕ್ಷ ಮೌಲ್ಯದ ವಾಚ್ ಅಸ್ಸಾಂನಲ್ಲಿ ಪತ್ತೆ

Watch
Photo Credit :

ಗುವಾಹಟಿ (ಡಿ. 11) : ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಅವರು ಬಳಕೆ ಮಾಡುತ್ತಿದ್ದ 20 ಲಕ್ಷದ ಮೌಲ್ಯದ ಹ್ಯೂಬ್ಲೆಟ್​ ವಾಚ್​ ಅಸ್ಸಾಂನಲ್ಲಿ ಪತ್ತೆಯಾಗಿದೆ. ದುಬೈನಲ್ಲಿ ಕಳುವಾಗಿದ್ದ ವಾಚ್​​ ಅನ್ನು ಇಂದು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ನಿವಾಸಿಯೊಬ್ಬರಿಂದ ಈ ವಾಚ್​ ವಶಪಡಿಸಿಕೊಳ್ಳಲಾಗಿದೆ . ಈತ ಇತ್ತೀಚೆಗಷ್ಟೇ ತನ್ನ ನಿವಾಸಕ್ಕೆ ಬಂದಿದ್ದಾಗ ಈ ವಾಚ್​ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್​ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

20 ಲಕ್ಷದ ಹ್ಯೂಬ್ಲೋಟ್​ ವಾಚ್​
ಅಂತರಾಷ್ಟ್ರೀಯ ಸಹಕಾರದ ಮೂಲಕ ಅಸ್ಸಾಂ ಪೊಲೀಸರು ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾಗೆ ಸೇರಿದ ಪರಂಪರೆಯ ಹ್ಯೂಬ್ಲೋಟ್​ ವಾಚ್ ಅನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ವಾಜಿದ್ ಹುಸೇನ್ ಅವರನ್ನು ಬಂಧಿಸಿದ್ದಾರೆ.
ಕಳೆದ ವರ್ಷ ನಿಧನರಾಗಿದ್ದ ಮರಡೋನಾ

ಅರ್ಜೆಂಟೀನಾದ ವೃತ್ತಿಪರ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ಪುಟ್ಬಾಲ್​ ದಂತಕಥೆ ಎಂದೇ ಖ್ಯಾತಿಗೊಂಡಿದ್ದರು. ಅವರು ಕಳೆದ ನವೆಂಬರ್ 2020 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ಆರೋಪಿ

ಅರ್ಜೆಂಟೀನಾದ ಫುಟ್‌ಬಾಲ್ ಆಟಗಾರನಿಗೆ ಸೇರಿದ್ದ ವಸ್ತುಗಳಲ್ಲಿ ದುಬೈನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಆ ಕಂಪನಿಯಲ್ಲಿ ಆರೋಪಿ ವಾಜಿದ್​ ಹುಸೇನ್​​ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆರೋಪಿ ಮತ್ತಿತ್ತರ ಸ್ನೇಹಿತರು ಮರಡೋನಾ ಸಹಿ ಮಾಡಿದ್ದ ಈ ದುಬಾರಿ ಬೆಲೆಯ ಹೆರಿಟೆಜ್​ ವಾಚ್​ ಕದ್ದಿದ್ದರು. ಹ್ಯೂಬ್ಲೋಟ್​​​ನ ಸೀಮಿತ ಆವೃತ್ತಿಯ ಈ ವಾಚ್​ ಮೇಲೆ ಮರಡೋನಾ ಸಹಿ ಇದೆ. ವಾಚ್​ ಕದ್ದ ಆರೋಪಿಗಳು ಈ ವರ್ಷ ಅಸ್ಸಾಂಗೆ ಮರಳಿದ್ದರು. ಆರೋಪಿ ತನ್ನ ಮಾವನ ಮನೆಗೆ ಬಂದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಆಧಾರದ ಮೇಲೆ ಕಾರ್ಯಾಚಾರಣೆ

ಈ ಸಂಬಂಧ ರಹಸ್ಯ ಮಾಹಿತಿ ಅನುಸಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಕುರಿತು ಮಾತನಾಡಿದ ಸಿವಸಾಗರ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್ ರೌಸನ್​, ಸಿಕ್ಕ ಗೌಪ್ಯ ಮಾಹಿತಿ ಆಧಾರದ ಮೇಲೆ ಈ ಕಾರ್ಯಚಾರಣೆ ನಡೆಸಲಾಗಿದೆ. ಕಳೆದ ರಾತ್ರಿ ಈ ವಾಚ್​ ಆರೋಪಿ ಬಳಿ ಇರುವ ಮಾಹಿತಿ ಪತ್ತೆಯಾಗಿತ್ತು. ಸದ್ಯ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗಿದೆ ಎಂದಿದ್ದಾರೆ.

ಫಿಫಾ ವರ್ಲ್ಡ್​ ಕಪ್​​ ವೇಳೆ ಧರಿಸಿದ್ದ ಮರಡೋನಾ

2010ರಲ್ಲಿ ನಡೆದ ಫಿಫಾ ವರ್ಲ್ಡ್​​ ಕಪ್​ ಪಂದ್ಯದ ವೇಳೆ ಡಿಯಾಗೋ ಮರಡೋನಾ ಎರಡು ದೊಡ್ಡ ಹ್ಯೂಬ್ಲೆಟ್​ ವಾಚ್​ ಧರಿಸಿದ್ದರು. ಈ ಸಂದರ್ಭದಲ್ಲಿ ಹ್ಯೂಬ್ಲೆಟ್​​ ಈ ಹೊಸ ಸರಣಿ ವಾಚ್​ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಜಯ ವಿಶ್ವಕಪ್​ ಪಂದ್ಯದ ಕಪ್​ ಎತ್ತಿ ಹಿಡಿದಿದ್ದ ಮರ್ಡೊನೋ ಕೈಯಲ್ಲಿ ಈ ವಾಚ್​ ಗಮನಿಸಬಹುದಾಗಿದೆ. ಇದರ ಮೇಲೆ ಮತ್ತು ಅಂದು ಅವರು ತೊಟಟ ಜೆರ್ಸಿ ಮೇಲೆ ಮಾರ್ಡೊನೋ ಹಸ್ತಾಕ್ಷರ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು