ಅಸ್ಸಾಂ : ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, 35 ಮಂದಿ ಕಾಣೆಯಾಗಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಜೋರ್ಹಾತ್ ಜಿಲ್ಲೆಯ ನಿಮಾತಿ ಘಾಟ್ನಲ್ಲಿ ಘಟನೆ ನಡೆದಿದ್ದು, ಮಾ ಕಮಲ ದೋಣಿ ನಿಮಾತಿ ಘಾಟ್ನಿಂದ ಮಜುಲಿಗೆ ಸಂಚರಿಸುತ್ತಿದ್ದಾಗ ಮಜಲಿಯಿಂದ ವಾಪಸ್ಸಾಗುತ್ತಿದ್ದ ಸರ್ಕಾರಿ ಸ್ವಾಮ್ಯದ ಟ್ರಿಪ್ಕೈಗೆ ಡಿಕ್ಕಿ ಹೊಡೆದು ಮುಳುಗಿದೆ. ಇಲ್ಲಿಯವರೆಗೆ ಒಬ್ಬರ ದೇಹ ಮಾತ್ರ ಪತ್ತೆಯಾಗಿದೆ. 42 ಜನರು ಈಜಿ ದಡ ಸೇರಿದ್ದಾರೆ. 35 ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.