News Karnataka Kannada
Monday, April 29 2024
ಅಸ್ಸಾಂ

ಅಸ್ಸಾಂ ಪ್ರವಾಹ ೩.೫ ಲಕ್ಷ ಜನರ ಜೀವನ ಅಸ್ತವ್ಯಸ್ತ

Rain Damage 19 6 21 Dt196219 Newsk 2068095139
Photo Credit :

ಗುವಾಹಟಿ, ; ಅಸ್ಸಾಂನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ೧೭ ಜಿಲ್ಲೆಗಳ ಸುಮಾರು ೩.೬೩ ಲಕ್ಷ ಜನರು ಸಂಕಷ್ಟಕ್ಕಿಡಾಗಿದ್ದಾರೆ.
ಆಗಸ್ಟ್ ೩೦ ರಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಅಸ್ಸಾಂನ ೨೧ ಜಿಲ್ಲೆಗಳ ೯೫೦ ಹಳ್ಳಿಗಳು ೩,೬೩,೧೩೫ ಜನರು ವಾಸಿಸುತ್ತಿದ್ದು, ಇದೀಗ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ ಎನ್ನಲಾಗಿದೆ.ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ರಾಜ್ಯದಲ್ಲಿ ೧೬ ಪರಿಹಾರ ಶಿಬಿರಗಳು ಮತ್ತು ೨೮ ಪರಿಹಾರ ವಿತರಣಾ ಕೇಂದ್ರಗಳನ್ನು ಒಳಗೊಂಡ ೪೪ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.ಈ ಪರಿಹಾರ ಶಿಬಿರಗಳಲ್ಲಿ ಒಟ್ಟು ೧,೬೧೯ ಜನರು ಆಶ್ರಯ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.ಮಳೆ ಸಂಬಂಧಿ ಅವಘಡಕ್ಕೆ ಸೋಮವಾರ ಇಬ್ಬರು ಬಲಿಯಾಗಿದ್ದಾರೆಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬರ್ಪೇಟಾ ಜಿಲ್ಲೆಯ ಚೆಂಗಾದಲ್ಲಿ ಮತ್ತು ಮಯಂಗ್‌ನಲ್ಲಿ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು