News Karnataka Kannada
Friday, May 17 2024
ಅಸ್ಸಾಂ

ಅಸ್ಸಾಂ: ವಿಷಕಾರಿ ಅಣಬೆ ಸೇವಿಸಿ 13 ಮಂದಿ ದುರ್ಮರಣ

Photo Credit :

ಅಸ್ಸಾಂ : ವಿಷಕಾರಿ ಅಣಬೆ ಸೇವಿಸಿ ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ದಿಬ್ರುಗಢ್‌ನಲ್ಲಿರೋ ಕಾಡು ಅಣಬೆ ಸೇವಿಸಿದ್ದವರ ಪೈಕಿ 13 ಜನರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಣಬೆ ತಿಂದವರ ಪೈಕಿ ಇನ್ನು ಕೆಲವರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರನ್ನೆಲ್ಲ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೂರ್ವ ಅಸ್ಸಾಂನ ಚರೈಡಿಯೊ, ದಿಬ್ರುಗಢ್, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳ ಚಹಾ ತೋಟದ ಸಮುದಾಯದ 35 ಜನರನ್ನು ಕಳೆದ ಐದು ದಿನಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಅಣಬೆಯನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಾದ 35 ಮಂದಿಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಪ್ರತಿ ವರ್ಷವೂ ಇಂತಹ ಕಾಡು ಅಣಬೆ ತಿಂದು ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಸಾವು ಕೂಡ ಸಂಭವಿಸುತ್ತಿದೆ.

ವಿಷಕಾರಿ ಕಾಡು ಅಣಬೆಯನ್ನು ಗುರುತಿಸುವುದು ಅಸಾಧ್ಯವಾಗಿರುವುದೇ ಈ ದುರಂತಕ್ಕೆ ಕಾರಣ. ಜಗತ್ತಿನಲ್ಲಿ ಅನೇಕ ರೀತಿಯ ವಿಷಕಾರಿ ಅಣಬೆಗಳು ಕಂಡುಬರುತ್ತವೆ. ಅವುಗಳನ್ನು ತಿಂದರೆ ಅಪಾಯ ಗ್ಯಾರಂಟಿ. ಸಮಯಕ್ಕೆ ಚಿಕಿತ್ಸೆ ಸಿಗದೇ ಇದ್ದರೆ ಸಾವಿಗೆ ಕಾರಣವಾಗಬಹುದು. ಇವುಗಳ ಸೇವನೆಯಿಂದ ಜನರು ದೃಷ್ಟಿ ಕಳೆದುಕೊಳ್ತಾರೆ. ಕೆಲವೊಮ್ಮೆ ಮೂತ್ರಪಿಂಡಗಳಿಗೂ ಹಾನಿಯಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು