ಕೆಲವೊಮ್ಮೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತವೆ. ಇಂಥದ್ದೇ ಒಂದು ವಿಚಿತ್ರ ಅಸ್ಸಾಂನಲ್ಲಿ ನಡೆದಿದ್ದು, ಮಾನವ ಮುಖಕ್ಕೆ ಹೋಲುವ ಮೇಕೆ ಮರಿ ಜನನವಾಗಿದೆ. ಅಸ್ಸಾಂನ ಧೋಲಾಯಿ ಬಳಿಯ ಗಂಗಾಪುರದಲ್ಲಿ ಘಟನೆ ನಡೆದಿದ್ದು, ಮೇಕೆ ಮರಿ ನೋಡಿ ಜನ ಆಶ್ಚರ್ಯಪಟ್ಟಿದ್ದಾರೆ.
ಈ ರೀತಿ ವಿಚಿತ್ರವಾಗಿ ಹುಟ್ಟಿದ್ದರೂ ಮೇಕೆ ಮರಿ ಜೀವಂತವಾಗಿದೆ. ಕಣ್ಣು ಮೂಗು ಹಾಗೂ ಬಾಯಿ ಮನುಷ್ಯರ ರೀತಿ ಇದ್ದು, ಕಿವಿ ಮಾತ್ರ ಮೇಕೆ ರೀತಿ ಇದೆ. ಎರಡು ಕಾಲು ಇದ್ದು, ಈ ಮೇಕೆ ಮರಿ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ. ಶಂಕರ್ದಾಸ್ ಎನ್ನುವವರು ಸಾಕಿದ್ದ ಮೇಕೆ ಈ ರೀತಿ ಮಾನವನನ್ನು ಹೋಲುವ ಮರಿಗೆ ಜನ್ಮ ನೀಡಿದೆ.