ಆಂಧ್ರಪ್ರದೇಶ: ಲೋಕಸಭಾ ಚುನಾವಣೆಯಲ್ಲಿ ೪೦೦ ಸೀಟು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ತೆಲುಗು ದೇಸಂ ಪಾರ್ಟಿ ಮತ್ತು ಜನ ಸೇನಾ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಈ ಬಗ್ಗೆ ಮಾತನಾಡಿದ TDP ಆಧ್ಯಕ್ಷ ಚಂದ್ರಬಾಬು ನಾಯ್ಡು, ಲೋಕಸಭೆಯ ಜೊತೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆಯ ಚುನಾವಣೆಯಲ್ಲೂ ಮೈತ್ರಿ ಪ್ರಭಾವ ಬೀರಲಿದೆ ಎಂದರು.
ಮೂರು ಪಕ್ಷದ ಜಂಟಿ ಹೇಳಿಕೆ ಬರುವುದು ಇನ್ನೂ ಬಾಕಿ ಇದೆ.
ಜನ ಸೇನಾ ಪಕ್ಷದ ಅಧ್ಯಕ್ಷ ಪವನ್ ಕಾಲ್ಯಾಣ್ ಮತ್ತು ಚಂದ್ರಬಾಬು ನಾಯ್ಡು ಶುಕ್ರವಾರ ಬಿಜೆಪಿಯ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿದ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಆಂಧ್ರದ ೨೫ ಲೋಕಸಭಾ ಸ್ಥಾನಗಳಲ್ಲಿ ೧೦ ಸ್ಥಾನಗಳನ್ನು ಬಿಜೆಪಿ ಬಯಸಿದೆ ಎನ್ನಲಾಗಿದೆ.