ಜೀರಾ ರೈಸ್ ಇದು ಜೀರಿಗೆ, ತುಪ್ಪ ಮತ್ತು ಅಕ್ಕಿಯೊಂದಿಗೆ ತಯಾರಿಸಿದ ಸುಲಭ ಮತ್ತು ರುಚಿಯ ರೈಸ್ ಪಾಕವಿಧಾನ. ಇದನ್ನು ಸಾಮಾನ್ಯವಾಗಿ ದಾಲ್ ಪಾಕವಿಧಾನಗಳ ಆಯ್ಕೆಯೊಂದಿಗೆ ನೀಡಲಾಗುತ್ತದೆ, ನೀವೂ ಕೇವಲ 10 ನಿಮಿಷದಲ್ಲಿಯೇ ಮಾಡಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
* ಅಕ್ಕಿ- 1ಕಪ್
* ತುಪ್ಪ- ಅರ್ಧ ಕಪ್
* ಪಲಾವ್ ಎಲೆ- 2
* ಚಕ್ಕೆ, ಲವಂಗ- ಸ್ವಲ್ಪ
* ಜೀರಿಗೆ- 4 ಚಮಚ
* ಹಸಿಮೆಣಸಿನಕಾಯಿ- 2
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿಸೊಪ್ಪು- ಸ್ವಲ್ಪ
ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೆನೆಸಿಡಿ. ಕುಕ್ಕರ್ಗೆ ತುಪ್ಪ ಹಾಕಿ ಬಿಸಿ ಮಾಡಿ ನಂತರ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ, ಹಸಿಮೆಣಸಿನಕಾಯಿಯನ್ನು ಕತ್ತರಿಸಿ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಅಕ್ಕಿಯನ್ನು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ನಂತರ ಇದಕ್ಕೆ 2 ಕಪ್ ನೀರು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಸೇರಿಸಿ ಬೇಯಿಸಿದರೆ ರುಚಿಯಾದ ಜೀರಾ ರೈಸ್ ಸವಿಯಲು ಸಿದ್ಧವಾಗುತ್ತದೆ.