News Karnataka Kannada
Monday, May 06 2024
ದೇಶ

ವಿಮಾನ ಪ್ರಯಾಣ ತುಟ್ಟಿ– ದರವನ್ನು ಏರಿಸಿದ ಸಚಿವಾಲಯ

Air India 14082021
Photo Credit :

ನವದೆಹಲಿ: ದೇಶಿ ವಿಮಾನ ಪ್ರಯಾಣ ದರವು ಮತ್ತೆ ದುಬಾರಿ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಕನಿಷ್ಠ ಹಾಗೂ ಗರಿಷ್ಠ ದರವನ್ನು ಕ್ರಮವಾಗಿ ಶೇ 9.83 ಮತ್ತು ಶೇ 12.82ರಷ್ಟು ಹೆಚ್ಚಳ ಮಾಡಿದೆ.

2020ರಲ್ಲಿ ಎರಡು ತಿಂಗಳ ಲಾಕ್‌ಡೌನ್‌ ನಂತರ, ಮೇ 25ರಂದು ಕನಿಷ್ಠ ಮತ್ತು ಗರಿಷ್ಠ ಬೆಲೆಯನ್ನು ಕೇಂದ್ರ ಸರ್ಕಾರವು ನಿಗದಿ ಮಾಡಿತ್ತು. ವಿಮಾನದ ಹಾರಾಟ ಅವಧಿಯನ್ನು ಆಧರಿಸಿ ಇದನ್ನು ನಿಗದಿ ಮಾಡಲಾಗಿತ್ತು.

ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ ವಿಮಾನಯಾನ ಕಂಪನಿಗಳಿಗೆ ನೆರವಾಗುವ ಉದ್ದೇಶದಿಂದ ಬೆಲೆ ನಿಗದಿ ಮಾಡಲಾಗಿತ್ತು.

40 ನಿಮಿಷಗಳಿಗಿಂತ ಕಡಿಮೆ ಅವಧಿಯ ವಿಮಾನ ಪ್ರಯಾಣಕ್ಕೆ ಕೇಂದ್ರವು ₹ 2,900 ಕನಿಷ್ಠ ಬೆಲೆ, ₹ 8,800 ಗರಿಷ್ಠ ಬೆಲೆ ನಿಗದಿ ಮಾಡಿ ಆಗಸ್ಟ್‌ 12ರಂದು ಆದೇಶ ಹೊರಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು