ಹಾಲು ಸಂಗ್ರಹಣೆ ವೆಚ್ಚದ ಏರಿಕೆಯಿಂದಾಗಿ ಮದರ್ ಡೈರಿ ಹಾಲಿನ ಬೆಲೆ ಕೂಡ ಲೀಟರ್ ಗೆ 2 ರೂ. ಏರಿಕೆ ಮಾಡಲಾಗಿದೆ ಎಂದು ಸಂಸ್ಥೆ ಘೋಷಿಸಿದೆ.
ಇತ್ತೀಚೆಗಷ್ಟೆ ಅಮುಲ್ ಹಾಗೂ ಪರಾಗ್ ಹಾಲಿ ಉತ್ಪನ್ನಗಳ ಸಂಸ್ಥೆ ಪ್ರತಿ ಲೀಟರ್ ಗೆ 2 ರೂ. ಏರಿಕೆ ಮಾಡಿದ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರವನ್ನೂ ಹೆಚ್ಚಿಸಲಾಗಿದೆ.
ಈ ಹೊಸ ದರ ಕೇವಲ ದೆಹಲಿ-ಎನ್ ಸಿ ಆರ್ ವ್ಯಾಪ್ತಿಗೆ ಮಾತ್ರ ಅನ್ವಯಿಸಲಿದೆ. ಇನ್ನು ನಾಳೆಯಿಂದ ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮದರ್ ಡೈರಿ ಹಾಲಿನ ಬೆಲೆ ಹೆಚ್ಚಾಗಲಿದೆ.
ಇಂದಿನಿಂದ ಮದರ್ ಡೈರಿಯ ಕೆನೆ ಹಾಲಿನ ದರ ಲೀಟರ್ ಗೆ 57ರೂ.ನಿಂದ 59 ರೂ, ಗೆ ಏರಿಕೆಯಾಗಿದೆ. ಹಸುವಿನ ಹಾಲಿನ ದರ ಲೀಟರ್ಗೆ 49 ರೂ.ನಿಂದ 51 ರೂ.ಗೆ ಏರಿಕೆಯಾಗಿದೆ.
ಹಾಲು ಸಂಗ್ರಹಣೆ, ಇಂಧನ ವೆಚ್ಚಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಮದರ್ ಡೈರಿಯು ಹಾಲಿನ ಬೆಲೆಯನ್ನು 2 ರೂ.ಗೆ ಹೆಚ್ಚಿಸಲಾಗಿದೆ.