ಗಣೇಶ ಚತುರ್ಥಿ ಮುಗಿದಿದೆ. ಆದರೆ ದೇಶಾದ್ಯಂತ ಗಣೇಶನ ಹಬ್ಬವನ್ನು ತಿಂಗಳ ಕಾಲ ಆಚರಿಸಲಾಗುತ್ತದೆ. ಎಲ್ಲರ ಸಾಮಾಜಿಕ ಜಾಲತಾಣ ಖಾತೆಗಳು ಗಣೇಶನ ಫೋಟೋದಿಂದ ತುಂಬಿ ಹೋಗಿದೆ. ಈ ಮಧ್ಯೆ ಇಂಡಿಗೋ ಏರ್ಲೈನ್ಸ್ ಕೂಡ ಗಣೇಶ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಿದೆ.
ವಿಶೇಷ ಸಂದರ್ಭಗಳ ಫೋಟೋ ವೀಡಿಯೋಗಳನ್ನು ಸದಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಇಂಡಿಗೋ ಏರ್ಲೈನ್ಸ್ ಈ ಬಾರಿ ಗಣೇಶ ವಿಮಾನದಲ್ಲಿ ಬರುತ್ತಿರುವ ಫೋಟೋವನ್ನು ಶೇರ್ ಮಾಡಿ ಗಣೇಶ ಹಬ್ಬದ ಶುಭ ಕೋರಿದ್ದಾರೆ.
ಇದು ಕೃತಕ ಬುದ್ಧಿಮತ್ತೆ ಬಳಸಿ ನಿರ್ಮಿಸಿದ ಫೋಟೋ ಆಗಿದ್ದು, ಬಪ್ಪ ಮನೆಗೆ ಬರುತ್ತಿದ್ದಾನೆ ಎಂದು ಬರೆದು ಈ ಪೋಟೋವನ್ನು ಶೇರ್ ಮಾಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ. ಇಂಡಿಗೋ ವಿಮಾನದ ವಿಂಡೋ ಸೈಡ್ ಸೀಟಿನಲ್ಲಿ ಕುಳಿತಿರುವ ಗಣೇಶ ಮಡಿಲಲ್ಲಿ ದೊಡ್ಡ ಬಟ್ಟಲಿನಲ್ಲಿ ಮೋದಕವನ್ನು ಇರಿಸಿಕೊಂಡಿದ್ದಾನೆ. ಈ ಫೋಟೋ ನೋಡಿದ ಬಹುತೇಕರು ಮೆಚ್ಚುಗೆಯಿಂದ ಕಾಮೆಂಟ್ ಮಾಡಿದ್ದಾರೆ.