News Karnataka Kannada
Friday, May 10 2024
ದೇಶ

ಅತ್ತ ಮಗುವಿಗೆ ಅಮ್ಮನಾದ ಮಹಿಳಾ ಪೊಲೀಸ್‌: ಫೋಟೋ ವೈರಲ್‌

Constable Takes Care Of baby
Photo Credit : Twitter

ಅಹಮದಾಬಾದ್: ಗುಜರಾತ್‌ ಓಧವ್‌ನಲ್ಲಿ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಆಕೆಯ ಅಳುತ್ತಿದ್ದ ಮಗುವನ್ನು ಸಂತೈಸುವ ಹೃದಯಸ್ಪರ್ಶಿ ಕಾರ್ಯ ಮಾಡಿದ ಮಹಿಳಾ ಪೊಲೀಸ್‌ ಸಿಬ್ಬಂದಿ ಹೃದಯಸ್ಪರ್ಶಿ ಕಾರ್ಯಕ್ಕೆ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಗುಜರಾತ್ ಹೈಕೋರ್ಟ್‌ನ ಪ್ಯೂನ್ ನೇಮಕಾತಿ ಪರೀಕ್ಷೆ ಬರೆಯಲು ಓಧವ್‌ನ ಪರೀಕ್ಷಾ ಕೇಂದ್ರಕ್ಕೆ ಮಹಿಳೆಯೊಬ್ಬರು ತಮ್ಮ 6 ತಿಂಗಳ ಮಗುವಿನೊಂದಿಗೆ ಬಂದಿದ್ದಾರೆ. ಇಲ್ಲಿ ಮಗುವಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಇಲ್ಲ. ಆದರೆ ಮಗುವನ್ನು ನೋಡಿಕೊಳ್ಳಲು ಬೇರೆಯವರು ಇಲ್ಲದ ಕಾರಣ ತಾಯಿ ಅನಿವಾರ್ಯವಾಗಿ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದರು. ತಾಯಿ ಮಗುವನ್ನು ಪರೀಕ್ಷಾ ಕೇಂದ್ರದ ಹೊರಗಡೆ ಬಿಟ್ಟು ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಒಂದೇ ಸಮನೆ ಮಗು ಅಳಲು ಆರಂಭಿಸಿದ್ದು, ‌ ಮಗುವನ್ನು ಪರೀಕ್ಷಾ ಕೇಂದ್ರದ ಭದ್ರತೆ ಒದಗಿಸುವಲ್ಲಿ ನಿರತರಾಗಿದ್ದ ಮಹಿಳಾ ಕಾನ್ಸ್ಟೆಬಲ್‌ ಒಬ್ಬರು ಸಂತೈಸಿದರು. ಈ ಬಗ್ಗೆ ಅಹಮದಾಬಾದ್ ಪೋಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಾನ್ ಸ್ಟೇಬಲ್ ದಯಾ ಬೆನ್ 6 ತಿಂಗಳ ಮಗುವನ್ನು ಹಿಡಿದುಕೊಂಡು ಆಟವಾಡುತ್ತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಮಹಿಳೆಯ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ, ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಬರೆಯುವಂತೆ, ಆಕೆಯ ಮಗು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಮ್ಮ ಸಿಬ್ಬಂದಿ ಎಂದು ಪೊಲೀಸ್​​ ಇಲಾಖೆ ತಮ್ಮ ಟ್ವಿಟರ್​​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ, ಫೋಟೋ ಎಲ್ಲ ಕಡೆ ವೈರಲ್ ಆಗಿದ್ದು, ಪೊಲೀಸ್​​ ಸಿಬ್ಬಂದಿ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

”ಮೇಡಂ ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ, ಇನ್ನೊಬ್ಬ ಬಳಕೆದಾರ ಇದು ನಿಜವಾದ ಪೋಲೀಸರ ಕಾರ್ಯ, ಈಗಿನ ಕಾಲದಲ್ಲಿ ಮಗುವಿಗೆ ತುಂಬಾ ಕಿರಿಕಿರಿಯಾದರೆ, ನಿಮಗೆ ಈ ಕೆಲಸ ಉತ್ತಮ ಎಂದು ಅನ್ನಿಸರಬಹುದು ಎಂದು ಟ್ವಿಟರ್​ನಲ್ಲಿ ಕಮೆಂಟ್​ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು