News Karnataka Kannada
Tuesday, April 30 2024
ದೇಶ

ಮೋದಿ ಅವರಿಂದ ಸಿಂಧೂ ಮತ್ತಿತರ ಕ್ರೀಡಾಪಟುಗಳಿಗೆ ಐಸ್‌ ಕ್ರೀಂ

Sindhu
Photo Credit :

ದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಿಂಧುಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಐಸ್‌ ಕ್ರೀಮ್‌ ಸವಿದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್​ಗೆ ಹೊರಡುವ ಮುಂಚೆ ಪ್ರಧಾನಿ ಮೋದಿ ಅವರು ಭಾರತದ ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿದ್ದರು. ಆಗ ಸಿಂಧು ಅವರು ರಿಯೋ ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳುವ ಮುಂಚೆ ಫಿಟ್​​ನೆಸ್​ಗಾಗಿ ಐಸ್​ಕ್ರೀಂ ತಿನ್ನದೇ ಇದ್ದುದರ ಬಗ್ಗೆ ಪ್ರಸ್ತಾಪಿಸಿದ್ದ ಮೋದಿ, ಈ ಬಾರಿಯೂ ಹಾಗೇ ಮಾಡುತ್ತಿದ್ದಾರಾ ಕೇಳಿದ್ದರು. ಜೊತೆಗೆ, ‘ಶ್ರಮಪಟ್ಟು ಆಡಿ, ನೀವು ಮತ್ತೆ ಯಶಸ್ವಿಯಾಗುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ಒಲಿಂಪಿಕ್ಸ್​ನಿಂದ ಹಿಂತಿರುಗಿದಾಗ ನಾನು ನಿಮ್ಮೊಂದಿಗೆ ಐಸ್​ ಕ್ರೀಂ ತಿನ್ನುತ್ತೇನೆ’ ಎಂದಿದ್ದರು ಎನ್ನಲಾಗಿದೆ.
ಇದೀಗ ರಿಯೋ ಒಲಿಂಪಿಕ್ಸ್​ನಂತೆಯೇ, ಟೋಕಿಯೋ ಒಲಿಂಪಿಕ್ಸ್​ನಲ್ಲೂ ಸಿಂಧು ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. ಹಾಗೂ ಮೋದಿ ಅವರೊಂದಿಗೆ ನಿಂತು ಐಸ್​ಕ್ರೀಂ ಕೂಡ ತಿಂದಿದ್ದಾರೆ! ಸಾಮಾಜಿಕ ಮಾಧ್ಯಮದಲ್ಲಿ ಹರಿದುಬಂದಿರುವ ಚಿತ್ರಗಳ ಪ್ರಕಾರ, ಇದು ಮೋದಿ ಅವರು ಒಲಿಂಪಿಕ್ಸ್​ ಪದಕ ವಿಜೇತರಿಗಾಗಿ ಇಂದು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ನಡೆದಿದೆ. ಪ್ರಧಾನಿ ಮೋದಿ ತಮ್ಮ ಮಾತಿನಂತೆಯೇ ನಡೆದುಕೊಂಡು ಸಿಂಧು ಮತ್ತು ಇತರ ಕ್ರೀಡಾಪಟುಗಳಿಗೆ ಐಸ್​ಕ್ರೀಂ ಟ್ರೀಟ್​ ಕೊಡಿಸಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು