News Karnataka Kannada
Monday, May 13 2024
ದೇಶ

ಚೀನಾದ ವುಹಾನ್‌ ಲ್ಯಾಬ್‌ ನಿಂದಲೇ ಕೋವಿಡ್‌ ವೈರಾಣು ಸೋರಿಕೆ; ಅಮೇರಿಕ

Corona World 10072021
Photo Credit :

 

ವಾಷಿಂಗ್ಟನ್, – ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ 19 ವೈರಾಣು ಚೀನಾದ ವುಹಾನ್ ಸೂಕ್ಷ್ಮ ವೈರಾಣು ಸಂಸ್ಥೆಯಿಂದಲೇ ಸೋರಿಕೆಯಾಗಿದೆ ಎನ್ನುವ ಸಂಗತಿಯನ್ನು ಅಮೇರಿಕಾದ ರಿಪಬ್ಲಿಕನ್ ವರದಿ ಬಹಿರಂಗ ಪಡಿಸಿದೆ.
ಚೀನಾದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಜಗತ್ತಿನ ಎಲ್ಲ ದೇಶಗಳಿಗೂ ಹರಡಿದ್ದರೂ ಚೀನಾ ಮಾತ್ರ ನಮ್ಮಿಂದ ಸೋಂಕು ಹರಡಿಲ್ಲ ಪದೇ ಪದೇ ಹೇಳಿದ್ದನ್ನೇ ಹೇಳಿ ಜಗತ್ತನ್ನು ನಂಬಿಸುವ ಯತ್ನ ಮಾಡಿತ್ತು.
ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಚೀನಾಗೆ ತಜ್ಞರ ತಂಡ ಕಳುಹಿಸಿ ಕೊರೋನಾ ಸೋಂಕಿನ ಮೂಲ ಪತ್ತೆ ಹಚ್ಚಲು ಸೂಚಿಸಿತ್ತು. ಮೊದಮೊದಲು ತಜ್ಞರ ತಂಡ ಭೇಟಿ ನೀಡುವುದನ್ನು ಅಡ್ಡಿಪಡಿಸಿದ್ದ ಚೀನಾ ಸರ್ಕಾರ ನಂತರ ಭೇಟಿಗೆ ಅವಕಾಶ ನೀಡಿದ್ದಾದರೂ ಸೋಂಕು ನಮ್ಮಿಂದ ಹರಡಿಲ್ಲ ಎನ್ನುವ ಸಬೂಬು ನೀಡುತ್ತಿತ್ತು.
ಇದೀಗ ಅಮೇರಿಕದ ರಿಪಬ್ಲಿಕನ್ ವರದಿ ಚೀನಾದ ಪ್ರಯೋಗಾಲಯದಲ್ಲಿ ಸೋರಿಕೆಯಾಗಿದೆ ಎನ್ನುವ ವಿಷಯವನ್ನು ಹೊರಹಾಕಿದೆ. ಅಲ್ಲದೆ ಈ ಸಂಬಂಧ ಸಾಕಷ್ಟು ಪುರಾವೆಗಳನ್ನು ನೀಡಿದೆ.ಚೀನಾದ ವುಹಾನ್ ಪ್ರಯೋಗಾಲಯದಿಂದ 2019 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಸೋಂಕು ಜಗತ್ತಿನ ವಿವಿಧ ದೇಶಗಳಲ್ಲಿ ಹರಡಿದೆ. ಎಂದು ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಮೈಕ್ ವಾಲ್ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವು ಪ್ರಾಣಿಗಳಿಂದ ಮಾನವರಿಗೆ ಹರಡಿದೆ ಅದರಲ್ಲಿಯೂ ಸಮುದ್ರ ಆಹಾರದ ಮಾರಾಟ ಮಾಡುವ ಮಾರುಕಟ್ಟೆಗಳಲ್ಲಿ ಇದು ಕಾಣಿಸಿಕೊಂಡು ಆನಂತರ ಎಲ್ಲರಿಗೂ ಹರಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ..
2019ರ ಸೆಪ್ಟಂಬರ್ 12ನೇ ಮುಂಚೆಯೇ ವುಹಾನ್ ವೈರಾಣು ಸಂಸ್ಥೆಯಿಂದ ಸೋಂಕು ಸೋರಿಕೆಯಾಗಿದೆ ಎಂದು ತಿಳಿಸಲಾಗಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಕರೋನವೈರಸ್ ಮಾನವ ನಿರ್ಮಿತವಲ್ಲ ಅಥವಾ ಅದನ್ನು ಉತ್ಪತ್ತಿ ಮಾಡಿಲ್ಲ ಎಂದು ಹೇಳಿತ್ತು. ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷಜೋ ಬೈಡೆನ್ ಅವರು ಸೋಂಕಿನ ಮೂಲಗಳನ್ನು 90 ದಿನಗಳಲ್ಲಿ ಮಾಡುವಂತೆ ಗುಪ್ತಚರ ಸಂಸ್ಥೆ ಸೂಚಿಸಿದ್ದರು ಅದರಂತೆ ಇದೀಗ ವರದಿಯನ್ನು ಹೊರಹಾಕಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು