ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 31,443 ಕೊರೊನಾ ಸೋಂಕು ಪ್ರಕರಣ ದಾಖಲಾಗಿದ್ದು ಇದು ದೇಶದಲ್ಲಿ 118 ದಿನಗಳ ಬಳಿಕ ದಾಖಲಾದ ಅತೀ ಕಡಿಮೆ ಸೋಂಕು ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಪ್ರಸ್ತುತ ದೇಶದಲ್ಲಿ 4,31,315 ಸಕ್ರಿಯ ಪ್ರಕರಣಗಳಿದೆ.
ಕಳೆದ 24ಗಂಟೆಯಲ್ಲಿ 49,007 ಮಂದಿ ಗುಣಮುಖರಾಗುವ ಮೂಲಕ ದೇಶದಲ್ಲಿ ಇದುವರೆಗೆ 3,00,63,720 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.