ದೆಹಲಿ : ರೈಲು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ವ್ಯವಸ್ಥೆ ಒದಗಿಸಲು ದೆಹಲಿ ರೈಲ್ವೆ ನಿಲ್ದಾಣ ಮುಂದಾಗಿದೆ . ಈಗಾಗಲೇ ರೈಲ್ವೆ ಸ್ಟೇಷನ್ ನ ಪ್ಲಾಟ್ ಫಾರ್ಮ್ 1ರಲ್ಲಿ ಐಶಾರಾಮಿ ಸೋಫಾದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಪ್ರಯಾಣಿಕರು ಈಗಾಗಲೇ ಏರ್ಪೋರ್ಟ್’ನ ಮಾದರಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ.
ಈ ರೈಲ್ವೆ ನಿಲ್ದಾಣದಲ್ಲಿ ಮಸಾಜ್ ಚೇರ್, ಸಂಗೀತ, ಬ್ಯುಸಿನೆಸ್ ಸೆಂಟರ್ ರೀತಿಯ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ. ಇಲ್ಲಿ ಟಿವಿ, ಇಂಟರ್ನೆಟ್ ಹೊಂದಿರುವ ಕಂಪ್ಯೂಟರ್, ವೈಫೈ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ಎಲ್ಲಾ ವ್ಯವಸ್ಥೆಗಳು ದಿನದ 24 ಗಂಟೆ ಪಡೆಯಬಹುದಾಗಿದ್ದು, ಪ್ರಯಾಣಿಕರು ಮೊದಲ 1ಗಂಟೆಗೆ 150 ರೂ. ಪ್ರವೇಶ ಶುಲ್ಕ ಸೇರಿದಂತೆ ಮುಂದಿನ ಪ್ರತಿ 1 ಗಂಟೆಗೆ 99 ರೂ. ಶುಲ್ಕ ವಿಧಿಸಲಾಗಿದೆ. ಊಟ, ತಿಂಡಿ ಎಲ್ಲಾ ಇರುವ ಪ್ಯಾಕೇಜ್ ಗೆ ಸುಮಾರು 600ರೂ. ಶುಲ್ಕ ನಿಗದಿಪಡಿಸಲಾಗಿದೆ.