ಸಂಪೂರ್ಣ ಲಸಿಕೆ ಪಡೆದವರಿಗೆ ಅಮೆರಿಕ ಪ್ರವೇಶಿಸಲು ಇದೀಗ ಜೋ ಬಿಡನ್ ಸರ್ಕಾರ ಅನುಮತಿ ನೀಡಿದೆ. ಈ ನಿಯಮ ನವೆಂಬರ್ 2021ರಿಂದ ಜಾರಿಗೆ ಬರಲಿದ್ದು, ಭಾರತ ಸೇರಿದಂತೆ ಇತರೆ ಯೂರೋಪ್ ಪ್ರಯಾಣಿಕರ ಮೇಲೆ ಹೇರಲಾಗಿದ್ದ ಪ್ರಯಾಣದ ನಿರ್ಬಂಧವನ್ನು ಈಗ ಅಮೆರಿಕ ತೆಗೆದು ಹಾಕಿದೆ.
2020ರ ಆರಂಭದಲ್ಲಿ ಕೊರೋನಾ ಹರಡುವ ಭೀತಿಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ಪ್ರಯಾಣಿಕರ ಆಗಮನವನ್ನು ತಡೆದಿದ್ದರು. ಈ ಬಗ್ಗೆ ಮಾತನಾಡಿದ ಶ್ವೇತ ಭವನದ ವಕ್ತಾರ ಜೆಫ್ ಜೈಂಟ್ಸ್, ಹೊಸ ಅಂತಾರಾಷ್ಟ್ರೀಯ ವಿಮಾನಯಾನದ ನಿಯಮ ನವೆಂಬರ್ ನಿಂದ ಪ್ರಾರಂಭವಾಗಲಿದೆ. ಆದರೆ ಸುರಕ್ಚತಾ ಕ್ರಮಗಳು ಮುಂಚಿನಂತೆಯೇ ಮುಂದುವರೆಯಲಿದೆ.
ಈಗಾಗಲೇ ಅಮೆರಿಕದಲ್ಲಿ ಕೋವಿಡ್ ನಿಂದ 7 ಲಕ್ಷ ಮಂದಿ ಬಲಿಯಾಗಿದ್ದು, ಮುಂದೆ ಯಾವುದೇ ಕಾರಣಕ್ಕೂ ಚಾನ್ಸ್ ತೆಗೆದುಕೊಳ್ಳುವುದಿಲ್ಲ. ಅಮೆರಿಕಕ್ಕೆ ಬರಲಿಚ್ಛಿಸುವ ಪ್ರಯಾಣಿಕರು ಸಂಪೂರ್ಣ ಲಸಿಕೆ ಪಡೆದಿರಬೇಕು ಎಂದರು. ಅಮೆರಿಕದ ಅನುಮೋದನೆ ಪಡೆದ ಲಸಿಕೆ ಅಥವಾ ಬೇರೆ ಲಸಿಕೆಗಳಿಗೂ ಅಮೆರಿಕ ಹೊಸ ನಿಯಮದ ಅನ್ವಯ ಅನುಮತಿ ನೀಡಿದೆ