News Karnataka Kannada
Tuesday, May 07 2024
ವಿದೇಶ

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಡೆನ್ನಿಸ್ ಫ್ರಾನ್ಸಿಸ್

Dennis Francis elected president of UN General Assembly
Photo Credit : News Kannada

ವಿಶ್ವಸಂಸ್ಥೆ: ಟ್ರಿನಿಡಾಡಿಯನ್ (ದ್ವೀಪರಾಷ್ಟ್ರದ) ಹಿರಿಯ ರಾಜತಾಂತ್ರಿಕ ಡೆನ್ನಿಸ್ ಫ್ರಾನ್ಸಿಸ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗುರುವಾರ 193-ಸದಸ್ಯ ಅಸೆಂಬ್ಲಿಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅವರು ತನ್ನ ಅಧಿಕಾರಾವಧಿಯಲ್ಲಿ ಶಾಂತಿ, ಸಮೃದ್ಧಿ, ಪ್ರಗತಿ ಮತ್ತು ಸುಸ್ಥಿರತೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.

ವಿಶ್ವಸಂಸ್ಥೆ ಅಧಿವೇಶನ ಸೆಪ್ಟಂಬರ್‌ ನಲ್ಲಿ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಫ್ರಾನ್ಸಿಸ್‌ ಆಯ್ಕೆ ಮಹತ್ವ ಪಡೆದಿದೆ. ಅಲ್ಲದೆ ರಷ್ಯಾ ಉಕ್ರೇನ್‌ ಯುದ್ದ ಪರಿಸ್ಥಿತಿಯನ್ನು ಶಮನ ಮಾಡುವಲ್ಲಿ ಫ್ರಾನ್ಸಿಸ್‌ ಪಾತ್ರ ಮಹತ್ವದ್ದಾಗಿದೆ. ಭದ್ರತಾ ಮಂಡಳಿಯನ್ನು ಸುಧಾರಣೆ ಪ್ರಕ್ರಿಯೆಗೆ ಅನುವುಗಾರರನ್ನು ನೇಮಿಸುವಲ್ಲಿ ಫ್ರಾನ್ಸಿಸ್‌ ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ.

ಫ್ರಾನ್ಸಿಸ್ ಪ್ರಸ್ತುತ ಟ್ರಿನಿಡಾಡ್‌ನ ಖಾಯಂ ಪ್ರತಿನಿಧಿಯಾಗಿದ್ದಾರೆ. ಅವರ 40 ವರ್ಷಗಳ ರಾಜತಾಂತ್ರಿಕ ವೃತ್ತಿಜೀವನದಲ್ಲಿ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಭೆಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ.

ಟ್ರಿನಿಡಾಡ್ ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ಗುಂಪಿನ ಸದಸ್ಯರಾಗಿದ್ದಾರೆ. ಫ್ರಾನ್ಸಿಸ್ ಅವರು ಹಂಗೇರಿಯನ್ ರಾಜತಾಂತ್ರಿಕ ಸಿಸಾಬಾ ಕೊರೊಸಿ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು