ನವದೆಹಲಿ: ಭಾರತ ಕೆನಡಾ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಇತ್ತೀಚೆಗಷ್ಟೆ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಕೆನಡಾ ರಾಷ್ಟ್ರ, ಬೆಂಗಳೂರು, ಚಂಡೀಗಢ, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರದಿಂದ ಇರುವಂತೆ ತನ್ನ ರಾಯಭಾರ ಸಿಬ್ಬಂದಿ ಮತ್ತು ನಾಗರೀಕರಿಗೆ ಸೂಚನೆ ನೀಡಿದೆ.
ಇದೇ ವೇಳೆ ಬೆಂಗಳೂರು, ಮುಂಬೈ ಮತ್ತು ಚಂಡೀಗಢದಲ್ಲಿನ ದೂತಾವಾಸ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ದೆಹಲಿಯ ಕೇಂದ್ರದ ಮೂಲಕವೇ ನಿರ್ವಹಿಸಲಾಗುವುದು ಎಂದು ತಿಳಿಸಿದೆ. ಭಾರತದ ಎಚ್ಚರಿಕೆಗೆ ಬೆದರಿ ಶುಕ್ರವಾರ ತನ್ನ 41 ರಾಯಭಾರ ಸಿಬ್ಬಂದಿಗಳನ್ನು ತವರಿಗೆ ತೆರಳಿ ಕರೆಸಿಕೊಂಡ ಕೆನಡಾ ಸರ್ಕಾರ, ಅದರ ಬೆನ್ನಲ್ಲೇ ತನ್ನ ನಾಗರೀಕರಿಗೆ ಹಲವು ಸಲಹಾವಳಿ ಬಿಡುಗಡೆ ಮಾಡಿದೆ.