ಕಾಲಿವುಡ್ನ ಪ್ರಸಿದ್ಧನ ನಟ ಅಜಿತ್ ಕುಮಾರ್ ಶೂಟಿಂಗ್ ಸಮಯದಲ್ಲಿ ಡ್ರಿಪ್ಟ್ ಮಾಡುವ ವೇಳೆ ಕಾರು ಪಲ್ಟಿಯಾಗಿದೆ. ಈ ಅಪಘಾತದ ದೃಶ್ಯ ಕ್ಯಾಮೆರದಲಲಿ ಸೆರೆಯಾಗಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.
ಅಜಿತ್ ಕುಮಾರ್ ‘ವಿಡೈಮುಯರ್ಚಿ’ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆ. ಇದು ಕಳೆದ ವರ್ಷ ಶೂಟಿಂಗ್ ಸಮಯದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಸದ್ಯ ಮಧ್ಯಪ್ರದೇಶದಲ್ಲಿ ಪ್ರವಾಸದಲ್ಲಿರುವ ನಟ, ಕಳೆದ ವರ್ಷ ಕಾರು ಯುರೋಪಿನ್ ದೇಶದಲ್ಲಿ ಸ್ಟಂಟ್ ಮಾಡುವಾಗ ಅವರು ಚಲಾಯಿಸುತ್ತಿದ್ದ ಕಾರು ಪಲ್ಟಿ ಹೊಡೆದಿತ್ತು. ಡ್ಯೂಪ್ ಇಲ್ಲದೇ ನಟ ಕಾರು ಚಲಾಯಿಸುವ ಮತ್ತು ಸಾಹಸ ಮಾಡುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Bravery knows no bounds! 💪 Witness Ajith Kumar's fearless dedication as he takes on a daring stunt sequence in #VidaaMuyarchi without any stunt double. 🫡 🔥#AjithKumar pic.twitter.com/62NyEG4cvG
— Lyca Productions (@LycaProductions) April 4, 2024
ಅಜಿತ್ ಜೊತೆಗೆ ನಟ ಆರವ್ ಕೂಡ ಕಾರಿನಲ್ಲಿ ಇದ್ದರು. ಈ ಭಯಾನಕ ದೃಶ್ಯವನ್ನು ಪ್ರಚಾರಕ ಸುರೇಶ್ ಚಂದ್ರ ಹಂಚಿಕೊಂಡಿದ್ದಾರೆ. ‘‘ವಿಡೈಮುಯರ್ಚಿ ಚಿತ್ರೀಕರಣ ನವೆಂಬರ್ 2023’’ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಅಜಿತ್ ಕಾರು ಸ್ಟಂಟ್ ದೃಶ್ಯ ಸೆರೆಯಾಗಿದೆ. ಸದ್ಯ ಅಪಗಾತದಲ್ಲಿ ಯಾರಿಗೂ ಯಾವುದೇ ಅಪಾಯ ಆಗಲಿಲ್ಲ