News Karnataka Kannada
Friday, May 03 2024
ವಿದೇಶ

ಮಾರ್ಕೆಟ್‌ನಲ್ಲಿ ಕಾರ್‌ ಬಾಂಬ್‌ ಸ್ಪೋಟ : 7 ಮಂದಿ ಸ್ಥಳದಲ್ಲೇ ದುರ್ಮರಣ

ಸಿರಿಯಾದ ಅಜಾಜ್ ನಗರದ ಮಾರ್ಕೆಟ್​ನಲ್ಲಿ ಅಚಾನಕ್‌ ಕಾರ್‌ ಸ್ಪೋಟ ಗೊಂಡ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನಪ್ಪಿದ್ದು 30 ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ.
Photo Credit : NewsKarnataka

ಸಿರಿಯಾ: ಸಿರಿಯಾದ ಅಜಾಜ್ ನಗರದ ಮಾರ್ಕೆಟ್​ನಲ್ಲಿ ಅಚಾನಕ್‌ ಕಾರ್‌ ಸ್ಪೋಟ ಗೊಂಡ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನಪ್ಪಿದ್ದು 30 ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ.

ಅಜಾಜ್‌ ಮಾರ್ಕೆಟ್‌ ನಲ್ಲಿ ಎಂದಿನಂತೆ ಜನರು ತುಂಬಿದ್ದರು. ಸಂಜೆ ಹೊತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು ಈ ಸಮಯ ನೋಡಿಕೊಂಡು ಕಾರ್‌ ಬಾಂಬ್‌ ಅನ್ನು ಸ್ಪೋಟಿಸಲಾಗಿದೆ.ಕಾರಿನಲ್ಲಿದ್ದ ಬಾಂಬ್ ಭಯಾನಕವಾಗಿ ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಗಾಯಳಗಳನ್ನು ಆಸ್ಪತ್ರಗೆ ದಾಖಲಿಸಲಾಗಿದೆ.

ಮಾಹಿತಿ ತಿಳಿದ ಕೂಡಲೇ ಪೊಲೀಸ್‌ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂಧಿಸಿದ್ದಾರೆ. ಇನ್ನು ಈ ಕೃತ್ಯ ಹಿಂದೆ ಯಾರ ಕೈವಾಡ ವಿದೆ ಎಂದು ತಿಳಿದು ಬಂದಿಲ್ಲ. ಟರ್ಕಿಯ ಗಡಿಯ ಸಮೀಪದ ಹಾಗೂ ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಅಜಾಜ್‌ನಲ್ಲಿ ಭಯ ಹುಟ್ಟಿಸಲು ಇಂಥಹ ಹಿಂಸಾತ್ಮಕ ಕೃಥ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು