News Karnataka Kannada
Friday, May 03 2024
ಬೆಂಗಳೂರು

ಮಗು ದತ್ತು ಪಡೆದ ಪ್ರಕರಣ : ಸೋನು ಗೌಡಗೆ ಕೊನೆಗೂ ಕೋರ್ಟ್ ನಿಂದ ಬಿಗ್ ರಿಲೀಫ್

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್‌ ಬೆಡಗಿ ಸೋನು ಗೌಡ ಅವರನ್ನು ಬಂಧಿಸಿ ಪರಪ್ಪನ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಸೋನು ಶ್ರೀನಿವಾಸ್‌ ಗೌಡಗೆ ಕೋರ್ಟ್‌ ರಿಲೀಫ್‌ ನೀಡಿದೆ.
Photo Credit : NewsKarnataka

ಬೆಂಗಳೂರು:  ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್‌ ಬೆಡಗಿ ಸೋನು ಗೌಡ ಅವರನ್ನು ಬಂಧಿಸಿ ಪರಪ್ಪನ ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಸೋನು ಶ್ರೀನಿವಾಸ್‌ ಗೌಡಗೆ ಕೋರ್ಟ್‌ ರಿಲೀಫ್‌ ನೀಡಿದೆ.

ಕಾನೂನು ಬಾಹಿರವಾಗಿ ಮಗವನ್ನು ದತ್ತು ಪಡೆದಿದ್ದ ಸೋನು ಗೌಡ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಮಾರ್ಚ್ 22ರಂದು ಬ್ಯಾಡರಹಳ್ಳಿ ಪೊಲೀಸರು ಸೋನು ಗೌಡರನ್ನು ಅರೆಸ್ಟ್​ ಮಾಡಿದ್ದರು.

ಕಾಚಾಪುರದ ಬಡ ದಂಪತಿ ದುಡಿಯಲು ಅಂತಾ ಬೆಂಗಳೂರಿಗೆ ಹೋಗಿದ್ದು, ಅಲ್ಲೇ ಮಗು ಪೋಷಕರನ್ನ ಸೋನು ಪರಿಚಯ ಮಾಡಿಕೊಂಡಿದ್ದರು. ಮಗುವನ್ನ ಅಕ್ರಮವಾಗಿ ದತ್ತು ಪಡೆದಿರೋದು ಗೊತ್ತಾಗಿದೆ. ಆದರೆ ಕೇಸ್‌ ದಾಖಲಾಗ್ತಿದ್ದಂತೆ ಮಗುವಿನ ಪೋಷಕರು ಮಾತ್ರ ಉಲ್ಟಾ ಹೊಡೆದಿದ್ದರು.

ಇದೀಗ ಆರೋಪಿ ಸ್ಥಾನದಲ್ಲಿ ಸೋನು ಶ್ರೀನಿವಾಸ್ ಗೌಡಗೆ PDJ ಕೋರ್ಟ್​ನಿಂದ ಜಾಮೀನು ತೀರ್ಪು ಹೊರಡಿಸಲಾಗಿದೆ. ಇನ್ನು, ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಎಂಬುವವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಅವರು ವಾದ ಮಂಡಿಸಿದ್ದರು.ಶ್ಯೂರಿಟಿ ಜೊತೆಗೆ 1 ಲಕ್ಷ ಬ್ಯಾಂಡ್ ಷರುತ್ತ ವಿಧಿಸಿ ನ್ಯಾಯಾಲಯ ಜಾಮೀನು‌ ಮಂಜೂರು ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು