News Karnataka Kannada
Monday, May 06 2024
ವಿದೇಶ

ಕಾರ್‌ ರೇಸ್‌ ವೇಳೆ ಅಪಘಾತ: ಏಳು ಮಂದಿ ಸಾವು

ಮೋಟಾರ್ ಕಾರ್ ರೇಸಿಂಗ್ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Photo Credit : NewsKarnataka

ಕೊಲೊಂಬೊ: ಮೋಟಾರ್‌ ಕಾರ್‌ ರೇಸಿಂಗ್‌ ವೇಳೆ ಅಪಘಾತ ಸಂಭವಿಸಿ ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದು, 23 ಜನ ಗಾಯಗೊಂಡ ಘಟನೆ ಶ್ರೀಲಂಕಾದ ಉವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

8 ವರ್ಷದ ಬಾಲಕ ಹಾಗೂ ನಾಲ್ವರು ಟ್ರ್ಯಾಕ್‌ ಸಹಾಯಕರು ಸೇರಿ 7 ಮಂದಿ ಮೃತಪಟ್ಟಿದ್ದಾರೆ.

ದೀಯತಲಾವದ ಸೆಂಟ್ರಲ್ ಹಿಲ್ ರೆಸಾರ್ಟ್‌ನಲ್ಲಿ ನಡೆದ ರೇಸ್‌ನಲ್ಲಿ ಕಾರೊಂದು ಟ್ರ್ಯಾಕ್‌ನಿಂದ ಪಲ್ಟಿಯಾಗಿ ಪ್ರೇಕ್ಷಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 23 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು