News Karnataka Kannada
Monday, May 20 2024
ಮನರಂಜನೆ

‘ಕಲ್ಕಿ 2898 ಎಡಿ’ ಚಿತ್ರದ ಅಮಿತಾಭ್ ಬಚ್ಚನ್ ಪೋಸ್ಟರ್ ರಿಲೀಸ್‌

ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಲುಕ್ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ ಚಿತ್ರತಂಡ ಅಮಿತಾಭ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ.
Photo Credit : NewsKarnataka

ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಲುಕ್ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ ಚಿತ್ರತಂಡ ಅಮಿತಾಭ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ.

ಕಲ್ಕಿ ಸಿನಿಮಾದಲ್ಲಿ ಬಿಗ್ ಬಿ ಪಾತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದಾರೆ. ದೇವಸ್ಥಾನದ ಎದುರು ಬಿಗ್ ಬಿ ಕುಳಿತಿದ್ದು, ಕಣ್ಣಿಗೆ ಸೂರ್ಯ ಕಿರಣ ಬಿದ್ದಿದೆ. ಮೈತುಂಬಾ ಬಟ್ಟೆ ಸುತ್ತಿಕೊಂಡಿದ್ದು, ನೋಟ ಖಡಕ್ ಆಗಿದೆ. ಪೋಸ್ಟರ್‌ನಲ್ಲಿ ಈಗ ಸಮಯ ಬಂದಿದೆ ಎಂದು ಅಡಿಬರಹ ನೀಡಿದ್ದಾರೆ.

ಸಿನಿಮಾದಲ್ಲಿ ಪ್ರಭಾಸ್​ ಜೊತೆ ಕಮಲ್​ ಹಾಸನ್​, ಅಮಿತಾಭ್​ ಬಚ್ಚನ್​, ದಿಶಾ ಪಟಾನಿ, ದೀಪಿಕಾ ಪಡುಕೋಣೆ ಅವರಂತಹ ಸೂಪರ್​ ಸ್ಟಾರ್​ ಕಲಾವಿದರು ಅಭಿನಯಿಸುತ್ತಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಹೆಚ್ಚಾಗಿದೆ. ನಾಗ್​ ಅಶ್ವಿನ್​ ಅವರು ನಿರ್ದೇಶನ ಮಾಡುತ್ತಿದ್ದು, ‘ವೈಜಯಂತಿ ಮೂವೀಸ್​’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು