ಬೈರೂತ್: ಮಂಗಳವಾರ ಸುಮಾರು 2750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡು 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆಯು ಲೆಬನಾನ್ ನ ಬೈರೂತ್ ನಲ್ಲಿ ನಡೆದಿದೆ.
ಬೈರೂತ್ ಬಂದರಿನಲ್ಲಿ ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿರುವುದು ಘಟನೆಗೆ ಕಾರಣವೆಂದು ಲೆಬನಾನ್ ಪ್ರಧಾನಿ ಹಸನ್ ಡಯಾಬ್ ಅವರು ತಿಳಿಸಿದ್ದಾರೆ.
ಆರು ವರ್ಷಗಳಿಂದ ಅಮೋನಿಯಂ ನೈಟ್ರೇಟ್ ನ್ನು ಸಂಗ್ರಹಿಸಿಡಲಾಗುತ್ತಿದೆ ಮತ್ತು ಇದು ಕ್ಷಮಾರ್ಹವಲ್ಲ ಎಂದು ಪ್ರಧಾನಿ ಅವರು ಹೇಳಿದ್ದಾರೆ.