ಅಸ್ಸಾಂ: ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಬಳಿ ಇದ್ದ ಹೆಲ್ಮೆಟ್ ಅನ್ನು ಆನೆಯೊಂದು ನುಂಗಿರುವ ಘಟನೆ ಅಸ್ಸಾಂ ಬಳಿ ನಡೆದಿದ್ದು, ವಿಡಿಯೋ ಒಂದು ವೈರಲ್ ಆಗಿದೆ.
ಅಸ್ಸಾಂನ ಗುವಾಹಟಿಯ ಸತ್ಗಾಂವ್ ಸೇನಾ ಶಿಬಿರದ ಬಳಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೈಕ್ ನಿಲ್ಲಿಸಿ ಬೈಕ್ನ ಮಿರರ್ ಬಳಿ ಹೆಲ್ಮೆಟ್ ಇಟ್ಟಿದ್ದರು. ಆ ಮಾರ್ಗವಾಗಿ ಸಂಚರಿಸುತ್ತಾ ಬಂದ ಆನೆಯೊಂದು ಬೈಕ್ ಬಳಿ ಬಂದು ಅಲ್ಲಿದ್ದ ಹೆಲ್ಮೆಟ್ ಅನ್ನು ಸೊಂಡಿಲಿಂದ ತೆಗೆದುಕೊಂಡು ನುಂಗಿಬಿಟ್ಟಿದೆ. ಆ ಮೇಲೆ ತನಗೇನೂ ಗೊತ್ತಿಲ್ಲ ಎಂಬಂತೆ ಮುಂದೆ ಸಾಗಿದೆ.