News Karnataka Kannada
Sunday, May 19 2024
ವಿದೇಶ

ಕರ್ನಾಟಕದಲ್ಲಿ ಶೇ.54ರಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆ ಇಳಿಮುಖ

Photo Credit :

ಕರ್ನಾಟಕದಲ್ಲಿ ಶೇ.54ರಷ್ಟು ವೈದ್ಯಕೀಯ ಆಮ್ಲಜನಕ ಪೂರೈಕೆ ಇಳಿಮುಖ

ಬೆಂಗಳೂರು, : ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ನಿರಂತರ ಇಳಿಮುಖವಾಗುತ್ತಿದೆ. ಇದರ ಮಧ್ಯೆ ರಾಜ್ಯದ ಕೊವಿಡ್-19 ಕೇಂದ್ರಗಳಿಗೆ ಹಂಚಿಕೆಯಾಗುತ್ತಿರುವ ವೈದ್ಯಕೀಯ ಆಮ್ಲಜನಕದ ಪ್ರಾಣದಲ್ಲೂ ಶೇ.54ರಷ್ಟು ಕುಸಿತ ಕಂಡು ಬಂದಿದೆ. ದಿನವೊಂದಕ್ಕೆ 1,200 ಮೆಟ್ರಿಕ್ ಟನ್ ಬದಲಿಗೆ 552 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಲಾಗುತ್ತಿದೆ.
ರಾಜ್ಯದ ಕೊವಿಡ್-19 ಆಸ್ಪತ್ರೆಗಳಲ್ಲಿ ದಿನವೊಂದಕ್ಕೆ ಬಳಸುವ ವೈದ್ಯಕೀಯ ಆಮ್ಲಜನಕದ ಪ್ರಮಾಣದಲ್ಲೂ ಶೇ.35ರಷ್ಟು ಇಳಿಕೆಯಾಗಿದೆ. ಗರಿಷ್ಠ 830 ಮಟ್ರಿಕ್ ಟನ್ ಬದಲಿಗೆ 529 ಮೆಟ್ರಿಕ್ ಟನ್ ಆಮ್ಲಜನಕವನ್ನು ಬಳಸಲಾಗುತ್ತಿದೆ.
ಜೂನ್ 9ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕಕ್ಕೆ ಪೂರೈಸುವ ವೈದ್ಯಕೀಯ ಆಮ್ಲಜನಕ ಹಂಚಿಕೆ ಪ್ರಮಾಣದ ಪರಿಷ್ಕರಣೆಗೆ ಸಂಬಂಧಿಸಿದಂತೆ ನೋಡೆಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿಗೆ ನೀಡುವ 180 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 552 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ರೋಗಿಗಳು ಅತಿಹೆಚ್ಚು ಉಸಿರಾಟ ಸಮಸ್ಯೆಗಳನ್ನು ಎದುರಿಸಿದರು. ಈ ಹಂತದಲ್ಲಿ ಮೇ ತಿಂಗಳ ವೇಳೆಗೆ ಕರ್ನಾಟಕಕ್ಕೆ ಒಂದು ದಿನಕ್ಕೆ 830 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿತ್ತು. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 285 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿತ್ತು. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಅತಿಹೆಚ್ಚು ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕ ಅತ್ಯಗತ್ಯವಾಗಿತ್ತು. ಹೈಕೋರ್ಟ್ ಸೂಚನೆ ನೀಡಿದ ನಂತರದಲ್ಲಿ 1,200 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಯಿತು. ಇದರ ಹೊರತಾಗಿಯೂ, ರಾಜ್ಯದಲ್ಲಿ ಪೂರೈಕೆದಾರರು ಪ್ರತಿನಿತ್ಯ 850 ಮೆಟ್ರಿಕ್ ಟನ್ ಆಮ್ಲಜನಕ ಪಡೆಯಲಾಗಿತ್ತು.
ಹೈಕೋರ್ಟ್ ಸೂಚನೆಗೂ ಮೊದಲು ರಾಜ್ಯ ಸರ್ಕಾರವು ಆಸ್ಪತ್ರೆಗಳಿಗೆ ಪ್ರತಿನಿತ್ಯ 765 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಲಾಗುತ್ತಿತ್ತು. ಈ ಪೈಕಿ ಬೆಂಗಳೂರಿನ ಆಸ್ಪತ್ರೆಗಳಿಗೆ 252 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜು ಮಾಡಲಾಗುತ್ತಿತ್ತು. ಏಪ್ರಿಲ್ 26 ರಿಂದ ಮೇ 7ರ ಅವಧಿಯಲ್ಲಿ ಚಾಮರಾಜನಗರ, ಕಲಬುರಗಿ ಮತ್ತು ಕೋಲಾರ ಜಿಲ್ಲೆಯಲ್ಲಿ ಕೊವಿಡ್-19 ರೋಗಿಗಳು ಆಮ್ಲಜನಕ ಕೊರತೆಯಿಂದಲೇ ಪ್ರಾಣ ಬಿಟ್ಟ ಪ್ರಕರಣಗಳು ಹೆಚ್ಚಾಗಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು