ಸೌದಿ ಅರೇಬಿಯಾದ ಜಿಜಾನ್ ನ ಕಿಂಗ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಡ್ರೋನ್ ದಾಳಿ ನಡೆದಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.
ಡ್ರೋನ್ ದಾಳಿಯಲ್ಲಿ 6 ಸೌದಿ ಪ್ರಜೆಗಳು, 3 ಬಾಂಗ್ಲಾದೇಶಿ ಹಾಗೂ 1 ಸುಡಾನ್ ಪ್ರಜೆ ಗಾಯಗೊಂಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದ ಮುಂಭಾಗದ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ತಿಳಿಸಿದ್ದಾರೆ.
ತಕ್ಷಣಕ್ಕೆ ಇರಾನ್ ಬೆಂಬಲಿತ ಹೌತಿಗಳು ಯಾವುದೇ ಹೊಣೆಗಾರಿಕೆ ಹೊತ್ತುಕೊಂಡಿಲ್ಲ. ಆದರೆ ಗಲ್ಫ್ ಸಾಮ್ರಾಜ್ಯವನ್ನು ಗುರಿಯಾಗಿಸಿ ಈ ಡ್ರೋನ್ ದಾಳಿ ನಡೆಸಲಾಗಿದೆ ಎನ್ನಲಾಗಿದೆ. 2015 ಯೆಮೆನ್ ನಲ್ಲಿನ ದಾಳಿ ಕುರಿತು ಸೌದಿ ನೇತೃತ್ವ ಸೇನಾ ಒಕ್ಕೂಟ ಇರಾನ್ ನ ಹೌತಿ ಗುಂಪಿನ ವಿರುದ್ಧ ಕಿಡಿಕಾರಿತ್ತು.