News Karnataka Kannada
Saturday, May 11 2024
ವಿದೇಶ

ತೂಕ ಇಳಿಸುವ ಜಾಹೀರಾತು ನೋಡಿ ಮೋಸ ಹೋದ್ರಂತೆ ಉಪ ರಾಷ್ಟ್ರಪತಿ ನಾಯ್ಡು….

Photo Credit :

ತೂಕ ಇಳಿಸುವ ಜಾಹೀರಾತು ನೋಡಿ ಮೋಸ ಹೋದ್ರಂತೆ ಉಪ ರಾಷ್ಟ್ರಪತಿ ನಾಯ್ಡು....

ನವದೆಹಲಿ: ತೂಕ ಇಳಿಸುವ ಮಾತ್ರೆಗಳ ಜಾಹೀರಾತಿಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಮೋಸ ಹೋದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ನಾಯ್ಡು ಅವರೇ ರಾಜ್ಯ ಸಭೆಯಲ್ಲಿ ಬಹಿರಂಗ ಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದರೊಬ್ಬರು ಜನರನ್ನು ದಾರಿ ತಪ್ಪಿಸುವ ಜಾಹೀರಾತಿನ ಕುರಿತು ಪ್ರಸ್ತಾಪಿಸಿದಾಗ ನಾಯ್ಡು ಅವರು ತಮಗಾದ ಮೋಸದ ಕುರಿತು ಹೇಳಿಕೊಂಡಿದ್ದಾರೆ.

ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ, ವ್ಯಾಯಾಮ, ಆಹಾರದಲ್ಲಿ ನಿಯಂತ್ರಣವಿಲ್ಲದೆ ಕೇವಲ 28 ದಿನಗಳಲ್ಲಿ ತೂಕ ಕಡಿಮೆ ಮಾಡಬಹುದು ಎಂಬ ಜಾಹೀರಾತನ್ನು ನಂಬಿ ನಾಯ್ಡು ಅವರು ಮಾತ್ರೆಗಾಗಿ 1,230 ರೂಪಾಯಿ ಕಳಿಸಿದ್ದರು. ಆದರೆ ಸ್ವಲ್ಪ ದಿನಗಳ ನಂತರ ನಾಯ್ಡು ಅವರ ವಿಳಾಸಕ್ಕೆ ಬಂದ ಪಾಸೆರ್ಲ್ ನಲ್ಲಿ ಯಾವುದೇ ಮಾತ್ರೆಗಳಿರಲಿಲ್ಲ. ಮಾತ್ರೆ ಬದಲು ಇನ್ನೊಂದು ಸಾವಿರ ಕಳುಹಿಸಿ ನಂತರ ಮಾತ್ರೆಗಳನ್ನು ಕಳುಹಿಸಲಾಗುವುದು ಎಂದು ಬೇಡಿಕೆಯನ್ನು ಇಟ್ಟಿದ್ದರು.

ಈ ಕುರಿತು ನಾಯ್ಡು ಅವರು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯಕ್ಕೆ ದೂರು ನೀಡಿದರು. ತನಿಖೆ ಆರಂಭಿಸಿದಾಗ ಸಚಿವಾಲಯ ಅಧಿಕಾರಿಗಳು ಆ ಜಾಹೀರಾತು ಅಮೆರಿಕದ್ದು ಎಂದು ತಿಳಿದು ಬಂದಿದೆ ಎಂದು ಅವರು ಹೇಳಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು