ಸುಹೈಲ್ ಶಾಹೀನ್ನನ್ನು ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನದ ರಾಯಭಾರಿಯನ್ನಾಗಿ ತಾಲಿಬಾನ್ ಘೋಷಿಸಿದೆ. ಶಾಹೀನ್ ಈ ವಾರ ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮಾತನಾಡಲಿದ್ದಾರೆ. ಅದಕ್ಕಾಗಿ ತಾಲಿಬಾನ್ ವಿಶ್ವಸಂಸ್ಥೆಗೆ ಪತ್ರ ಬರೆದು ವಿನಂತಿ ಮಾಡಿದೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮನ್ನು ಗುರುತಿಸಲು ಮತ್ತು ಯುದ್ಧಪೀಡಿತ ದೇಶವನ್ನು ಪುನರ್ ನಿರ್ಮಾಣ ಮಾಡಲು ಸಹಾಯ ಬಯಸುತ್ತಿರುವದಾಗಿ ತಾಲಿಬಾನ್ ಹೇಳಿದೆ.