News Karnataka Kannada
Wednesday, May 01 2024
ವಿದೇಶ

ಅಫ್ಘಾನ್  ಮಹಿಳೆಯರು  ಮಂತ್ರಿಯಾಗುವಂತಿಲ್ಲ: ತಾಲಿಬಾನ್

Taliban
Photo Credit :

ತಾಲಿಬಾನ್ :  ಅಫ್ಘಾನಿಸ್ಥಾನದಲ್ಲಿ ಮಹಿಳೆಯರು ಮಂತ್ರಿಯಾಗುವಂತಿಲ್ಲ ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ತಾಲಿಬಾನ್ ವಕ್ತಾರ ಸಯ್ಯುದ್ ಜೆಕ್ರುಲ್ಲಾ ಹಶಾಮಿ ಹೇಳಿದ್ದಾರೆ. ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ದಿನಕ್ಕೊಂದು ನಿಯಮ ಜಾರಿಗೆ ಬರುತ್ತಿದ್ದು, ಇವುಗಳಲ್ಲಿ ಮಹಿಳೆಯರ ಹಕ್ಕು ಹತ್ತಿಕ್ಕುವ ಕೆಲಸ ನಡೆಯುತಿದೆ. ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ.

ಮಹತ್ವದ ಜವಾಬ್ದಾರಿಗಳನ್ನು ಹೆಣ್ಣುಮಕ್ಕಳಿಗೆ ವಹಿಸಿದರೆ ಅವರ ಕುತ್ತಿಗೆ ಮೇಲೆ ಹೆಚ್ಚಿನ ಭಾರ ಹೇರಿದಂತಾಗುತ್ತದೆ. ಹೀಗಾಗಿ ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕಷ್ಟೇ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಅಫ್ಘಾನಿಸ್ತಾನದ ಸರ್ಕಾರದ ವಿರುದ್ಧ ಹೋರಾಡಿದ ಮಹಿಳೆಯರ ಬಗ್ಗೆ ಮಾತನಾಡಿದ ಅವರು, ಈ ಮಹಿಳಾ ಪ್ರತಿಭಟನಾಕಾರರು ಎಲ್ಲಾ ಅಫ್ಘಾನ್ ಮಹಿಳೆಯರನ್ನು ಪ್ರತಿನಿಧಿಸ ಸಾಧ್ಯವಿಲ್ಲ ಎಂದರು.

ತಾಲಿಬಾನ್ ಆಳ್ವಿಕೆಯಲ್ಲಿ ಶಾಲೆಯಲ್ಲಿ ಯುವಕ, ಯುವತಿಯರಿಗೆ ಪ್ರತ್ಯೇಕ ತರಬೇತಿ ನಡೆಸಬೇಕು., ಮಹಿಳೆಯರಿಗೆ ಯಾವುದೇ ರೀತಿಯ ಕ್ರೀಡೆಗಳಲ್ಲಿ ಭಾಗಿಯಾಗಲು ಅನುಮತಿ ಇಲ್ಲ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು