News Karnataka Kannada
Sunday, April 28 2024
ವಿದೇಶ

ಪಾಕಿಸ್ತಾನ ಕೋರಿದ ಒಂದೇ ಒಂದು ಮನವಿಗೆ ಇಡಿಯ ಸಾರ್ಕ್ ಸಭೆಯೇ ರದ್ದು

Sarc
Photo Credit :

ಪಾಕಿಸ್ತಾನ ಇಟ್ಟ ಒಂದೇ ಒಂದು ಬೇಡಿಕೆಯಿಂದ ಇದೀಗ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ ವಿದೇಶಾಂಗ ಮಂತ್ರಿಗಳ ಸಭೆ (SAARC)ಯನ್ನು ರದ್ದು ಮಾಡಲಾಗಿದೆ. ಸಾರ್ಕ್ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರವನ್ನು ಪ್ರತಿನಿಧಿಸಲು ಅನುಮತಿ ನೀಡುವಂತೆ ಪಾಕಿಸ್ತಾನ ಮನವಿ ಮಾಡಿದೆ. ಈ ಹಿನ್ನೆಲೆ ಸಾರ್ಕ್ ರಾಷ್ಟ್ರಗಳು ಇಡಿಯ ಸಭೆಯನ್ನೇ ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.

ಇದೇ ಶನಿವಾರ ಸೆ.25ರಂದು ನಡೆಯಬೇಕಿದ್ದ ಸಾರ್ಕ್ ಕೂಟದ ಆತಿಥ್ಯವನ್ನು ನೇಪಾಳ ವಹಿಸಲಿದ್ದು, ಭಾರತ, ನೇಪಾಳ ಸೇರಿದಂತೆ ಇತರ ಸಾರ್ಕ್ ಸದಸ್ಯ ರಾಷ್ಟ್ರಗಳು ಪಾಕಿಸ್ತಾನದ ಈ ಮನವಿಯನ್ನು ವಿರೋಧಿಸಿದ ಹಿನ್ನೆಲೆ ಸಭಾ ಸದಸ್ಯರ ಒಮ್ಮತದ ಕೊರತೆಯಿಂದಾಗಿ ಸಾರ್ಕ್ ಸಭೆಯನ್ನು ರದ್ದುಪಡಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿದ್ದ ಅಶ್ರಫ್ ಘನಿ ಸರ್ಕಾರವನ್ನು ಉರುಳಿಸಿ ತಾಲಿಬಾನ್ ಕಳೆದ ತಿಂಗಳು ತನ್ನದೇ ಸರ್ಕಾರವನ್ನು ಘೋಷಿಸಿತ್ತು. ತಾಲಿಬಾನ್ ಸರ್ಕಾರದ ಹಂಗಾಮಿ ವಿದೇಶಾಂಗ ಸಚಿವರಾಗಿರುವ ಅಮೀರ್ ಖಾನ್ ಮುಟ್ಟಾಕಿ ವಿಶ್ವಸಂಸ್ಥೆ ಮತ್ತು ಅಂಗಸಂಸ್ಥೆಯ ಯಾವುದೇ ಸಭೆಗಳಲ್ಲಿ ಭಾಗವಹಿಸುವ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಹೊರ ಬಂದಿಲ್ಲ.

ಸಾರ್ಕ್ ಸದಸ್ಯತ್ವ ಹೊಂದಿರುವ 8 ರಾಷ್ಟ್ರಗಳ ಪಟ್ಟಿ: ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ. ಈ ಬಾರಿ ಅಫ್ಘಾನಿಸ್ತಾನದಿಂದ ಯಾವುದೇ ಸದಸ್ಯರು ಸಭೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ಪಾಕ್ ನೀಡಿದ ಬೇಡಿಕೆ ಕಾರಣದಿಂದ ಸಭೆಯನ್ನು ರದ್ದುಗೊಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು