ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು ಶೀಘ್ರದಲ್ಲಿಯೆ ಶಾಲೆಗೆ ಮರಳಲಿದ್ದಾರೆ ಎಂದು ತಾಲಿಬಾನ್ ಘೋಷಿಸಿದೆ.
ತಾಲಿಬಾಣ್ ವಕ್ತಾರ ಜಬಿವುಲ್ಲಾ ಮುಕಾಹಿದ್ ಮಾತನಾಡಿದ್ದು, ಈ ವಿಚಾರಗಳನ್ನು ಈಗಾಗಲೇ ಅಂತಿಮಗೊಳಿಸಿದ್ದೇವೆ.
ಆದಷ್ಟು ಬೇಗ ಹೆಣ್ಣುಮಕ್ಕಳು ಶಾಲೆಗೆ ತೆರಳಬಹುದು ಎಂದು ಹೇಳಿದ್ದಾರೆ. ಶಿಕ್ಷಣ ಸಚಿವಾಲವು ಕಳೆದ ವಾರಾಂತ್ಯದಲ್ಲಿ ಮಾಧ್ಯಮಿಕ ಶಾಲೆಯ ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಗೆ ಮರಳುವಂತೆ ತಿಳಿಸಿತ್ತು. ಆದರೆ ದೇಶದ ಮಹಿಳಾ ಶಿಕ್ಷಕಿಯರು, ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.