ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಜೋಡಿ ಮಹಿಳಾ ಸಲಿಂಗಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ಮಹಿಳೆಯರಲ್ಲಿ ಒಬ್ಬಾಕೆಗೆ ಮಗುವಿದ್ದು ಮೊದಲಿಗೆ ಮಗುವನ್ನು ನೀರಿಗೆ ತಳ್ಳಿ ಆ ಬಳಿಕ ಜೋಡಿ ಒಂದೇ ದುಪ್ಪಟ್ಟದಲ್ಲಿ ಸುತ್ತಿಕೊಂಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಆಶಾ ಠಾಕೂರ್ (30), ಭಾವನಾ ಠಾಕೂರ್ (28) ಹಾಗೂ ಮೃತ ಮಗುವನ್ನು ಮೇಘಾ (3) ಎಂದು ಗುರುತಿಸಲಾಗಿದೆ.
ಈ ಜೋಡಿ ಸಾಯುವ ಮುನ್ನಾ ಪತ್ರ ಬರೆದಿದ್ದು ಅದರಲ್ಲಿ ”ಈ ಪ್ರಪಂಚವು ಬದುಕಿದ್ದಾಗ ನಮ್ಮನ್ನು ಒಂದಾಗಲು ಬಿಡಲಿಲ್ಲ. ಹಾಗಾಗಿ ನಾವು ಈ ಪ್ರಪಂಚದಿಂದ ದೂರಾಗುವ ಮೂಲಕ ಒಂದಾಗಲು ನಿರ್ಧರಿಸಿದ್ದೇವೆ,” ಎಂದು ಬರೆದಿದ್ದಾರೆ. ಮೃತ ಮಹಿಳೆಯರು ಅಹಮದಾಬಾದ್ ಜಿಲ್ಲೆಯ ರಾಜೋಡಾ ಗ್ರಾಮದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.