News Karnataka Kannada
Monday, April 29 2024
ಬೆಂಗಳೂರು ನಗರ

ಅಕ್ವೇರಿಯಂನಲ್ಲಿದ್ದ ಮೀನನ್ನು ನುಂಗಿದ 11 ತಿಂಗಳ ಮಗು

Photo Credit :

ಅಕ್ವೇರಿಯಂನಲ್ಲಿದ್ದ ಮೀನನ್ನು ನುಂಗಿದ 11 ತಿಂಗಳ ಮಗು

ಬೆಂಗಳೂರು: ಅಕ್ವೇರಿಯಂನಲ್ಲಿದ್ದ ಮೀನನ್ನು 11 ತಿಂಗಳ ಮಗುವೊಂದು ನುಂಗಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿರುವುದು ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಪೋಷಕರು ಕೊಲಂಬಿಯಾ 

ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಮಗುವಿನ 5-6 ಸೆಂ.ಮೀ ಮೀನು ಕಂಡು ಬಂದಿದೆ.

ಮೀನು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದ್ದರಿಂದ ಮಗುವಿಗೆ ಉಸಿರಾಡಲು ತೊಂದರೆಯಾಗಿದೆ. ಎಂಡೋಸ್ಕೋಪಿ ಮೂಲಕ ಮೀನನ್ನು ಹೊರತೆಗೆದು ಮಗುವಿನ ಜೀವ ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ತೀವ್ರ ಅಸ್ವಸ್ಥತೆಗೊಂಡಿದ್ದ ಮಗುವಿಗೆ ವೆಂಟಿಲೇಟರ್ ಅಳವಡಿಸಿ, ಪೂರಕ ಔಷಧಿಗಳನ್ನೊದಗಿಸಿದ ಬಳಿಕ ಚೇತರಿಸಿಕೊಂಡಿದೆ. ಎರಡು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಿದ ಬಳಿಕ ಸುಧಾರಿಸಿಕೊಂಡ ಮಗು ಸಹಜ ಸ್ಥಿತಿಗೆ ಮರಳಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು