ನವದೆಹಲಿ: ಸೋಮವಾರ ಸೆಶೆಲ್ಸ್ನ ಪ್ರಧಾನಿ ಡ್ಯಾನಿ ಫೌರೆ ಅವರು ದೆಹಲಿಗೆ ಭೇಟಿ ನೀಡಿದ್ದು ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ಈ ವೇಳೆ ಸೆಶೆಲ್ಸ್ ನ ಪ್ರಧಾನಿ ಡ್ಯಾನಿ ಅವರು, ‘ನಾನು ಶ್ರೇಷ್ಠ ರಾಷ್ಟ್ರದಲ್ಲಿದ್ದೇನೆ. ಭಾರತ ಮತ್ತು ಸೆಶೆಲ್ಸ್ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ನನ್ನ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಹೇಳಿದರು.
ಬಳಿಕ, ಡ್ಯಾನಿ ಫೌರೆ ಅವರು ರಾಜ್ಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.