News Karnataka Kannada
Sunday, May 19 2024
ಅಡುಗೆ ಮನೆ

ಪೂರಿ ಜತೆಗಿನ ಸಾಗು ಹೀಗಿರಲಿ!

Photo Credit :

ಪೂರಿ ಜತೆಗಿನ ಸಾಗು ಹೀಗಿರಲಿ!

ದೋಸೆ, ಚಪಾತಿ, ಪೂರಿ ಹೀಗೆ ಎಲ್ಲದಕ್ಕೂ ಸಾಗು ಇದ್ದರೆ ಬಾಯಿ ಚಪ್ಪರಿಸಿ ತಿನ್ನಲು ಖುಷಿಯಾಗುತ್ತದೆ. ಅದರಲ್ಲೂ ಪೂರಿ ಜತೆಗೆ ರುಚಿಯಾದ ಸಾಗು ಇದ್ದರಂತು ಅದರ ಮಜಾವೇ ಭಿನ್ನ. ಇಂತಹ ಸಾಗು ಮಾಡುವುದೇಗೆ ಎಂಬುದು ಇಲ್ಲಿದೆ.

ಸಾಗು ಮಾಡಲು ಬೇಕಾಗುವ ಪದಾರ್ಥಗಳು.

ಬೀನ್ಸ್

ಕ್ಯಾರೆಟ್

ಆಲೂಗೆಡ್ಡೆ

ಸೀಮೆಬದನೆಕಾಯಿ

ಬಟಾಣಿ

ಕೊತ್ತಂಬರಿ ಬೀಜ

ಗಸಗಸೆ

ಹುರಿಗಡಲೆ

ಚಕ್ಕೆ

ಲವಂಗ

ತೆಂಗಿನಕಾಯಿ ತುರಿ

ಕೊತ್ತಂಬರಿ ಸೊಪ್ಪು

ಕರಿಬೇವು

ಹಸಿಮೆಣಸಿನ ಕಾಯಿ

ಟೊಮ್ಯಾಟೋ

ಉಪ್ಪು

ಮಾಡುವ ವಿಧಾನ ಹೀಗಿದೆ…

ಸಾಗು ಮಾಡಲು ಬೇಕಾಗುವ ಬಟಾಣಿಯನ್ನು ಮೊದಲೇ ನೆನಸಿಟ್ಟುಕೊಳ್ಳಬೇಕು. ತರಕಾರಿಗಳಾದ ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ ಮತ್ತು ಸೀಮೆಬದನೆಕಾಯಿಯನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು.(ತರಕಾರಿಗಳನ್ನು ತಾವು ಮಾಡುವ ಪ್ರಮಾಣಕ್ಕೆ ಸಂಬಂಧಿಸಿದಂತೆ ಅಂದಾಜಿನಲ್ಲಿ ಬಳಸಿಕೊಳ್ಳಬೇಕು) ಬಳಿಕ ನೀರು ಹಾಕಿ ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಸೀಮೆಬದನೆಕಾಯಿ ಮತ್ತು ಬಟಾಣಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇನ್ನೊಂದೆಡೆ ಕೊತ್ತಂಬರಿ ಬೀಜ, ಗಸಗಸೆ, ಹುರಿಗಡಲೆ, ಚಕ್ಕೆ, ಲವಂಗ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನ ಕಾಯಿ, ಟೊಮ್ಯಾಟೋ ಮೊದಲಾದವುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಂಡು ಅದನ್ನು ಬೆಂದ ತರಕಾರಿಗೆ ಹಾಕಬೇಕು. ಬಳಿಕ ರುಚಿಗೆ ತಕ್ಕಂತೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಇಳಿಸಿ ಅದರ ಮೇಲೆ ಕೊತ್ತಂಬರಿಸೊಪ್ಪು ಉದುರಿಸಿದರೆ ಸಾಗು ರೆಡಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು