News Karnataka Kannada
Sunday, May 05 2024
ವಿದೇಶ

ಭಾರತದ ಜತೆಗಿನ ಎಲ್ಲಾ ವಹಿವಾಟು ಬಂದ್‌ ಮಾಡಿದ ತಾಲಿಬಾನ್‌ ಆಡಳಿತ

Talibans Rule
Photo Credit :

ನವದೆಹಲಿ, ; ಭಾರತದ ಜೊತೆಗಿನ ಎಲ್ಲಾ ರೀತಿಯ ಆಮದು ಹಾಗೂ ರಫ್ತುಗಳನ್ನು ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಸ್ಥಗಿತಗೊಳಿಸಿದೆ ಎಂದು ಭಾರತೀಯ ರಫ್ತು ಸಂಘಟನೆಯ ಒಕ್ಕೂಟದ (ಎಫ್‌ಐಇಓ) ಮಹಾನಿರ್ದೇಶಕ ಡಾ.ಅಜಯ್ ಸಹಾಯ್ ತಿಳಿಸಿದ್ದಾರೆ.
ವಿಶೇಷವಾಗಿ ವಾಣಿಜ್ಯ ಹಾಗೂ ಹೂಡಿಕೆ ಸೇರಿದಂತೆ ಭಾರತವು ಅಫ್ಘಾನಿಸ್ತಾನದ ಜೊತೆ ದೀರ್ಘಕಾಲದ ಬಾಂಧವ್ಯವನ್ನು ಹೊಂದಿದೆ.ಆದರೆ, ಪಾಕಿಸ್ತಾನದ ಸರಕು ಸಾಗಣಿಕೆ ಮಾರ್ಗಗಳ ಮೂಲ ಆಫ್ಘಾನ್‌ಗೆ ಆಗಮಿಸುವ ಎಲ್ಲಾ ಸಾಮಾಗ್ರಿಗಳ ಆಮದನ್ನು ತಾಲಿಬಾನ್ ಸ್ಥಗಿತಗೊಳಿಸಿದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ನಾವು ಆಫ್ಘಾನಿಸ್ತಾನದ ಅತಿ ದೊಡ್ಡ ಪಾಲುದಾರರಾಗಿದ್ದೆವು. 2021ರಲ್ಲಿ ಭಾರತವು 835 ದಶಲಕ್ಷ ಡಾಲರ್ ಮೌಲ್ಯದ ಸರಕು,ಸಾಮಾಗ್ರಿಗಳನ್ನು ಆಫ್ಘಾನಿಸ್ತಾನಕ್ಕೆ ರಫ್ತು ಮಾಡಿದೆ. ಭಾರತವು 510 ದಶಲಕ್ಷ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಆಫ್ಘಾನಿಸ್ತಾನದಲ್ಲಿ ಭಾರತವು 3 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ ಹಾಗೂ ಅಲ್ಲಿ ಸುಮಾರು 400ಕ್ಕೂ ಅಧಿಕ ಯೋಜನೆಗಳನ್ನು ಭಾರತ ಕೈಗೆತ್ತಿಕೊಂಡಿದ್ದು, ಅವುಗಳಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿವೆ ಎಂದು ಸಹಾಯ್ ತಿಳಿಸಿದ್ದಾರೆ.
ಆಫ್ಘಾನಿಸ್ತಾನದಲ್ಲಿನ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊರ ತಾಗಿಯೂ ಆ ದೇಶದ ಜೊತೆಗಿನ ವಾನಿಜ್ಯ ಬಾಂಧವ್ಯಗಳ ಬಗ್ಗೆ ತಾನು ಆಶಾವಾದಿಯಾಗಿರುವುದಾಗಿ ನುಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು