News Karnataka Kannada
Monday, April 29 2024
ವಿದೇಶ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‍ಗಳ ಅಟ್ಟಹಾಸ; ಮತ್ತೆ ಮೂರ್ತಿ ಧ್ವಂಸ!

Taliban
Photo Credit :

ಕಾಬೂಲ್‍: ಅಫ್ಗಾನಿಸ್ತಾನವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿರುವ ತಾಲಿಬಾನ್‍ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಮತ್ತೆ ಮೂರ್ತಿಗಳನ್ನು ಭಗ್ನಗೊಳಿಸುವ ಕಾರ್ಯ ಮುಂದುವರಿದಿದೆ. ಅಫ್ಗಾನಿಸ್ತಾನದ ಬಮಿಯಾನ್‍ ಪ್ರಾಂತ್ಯದಲ್ಲಿ ಅಬ್ದುಲ್‍ ಅಲಿ ಮಜಾರಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಹಜಾರೆ ಬುಡಕಟ್ಟು ಜನಾಂಗದ ನಾಯಕರಾಗಿದ್ದ ಮಜಾರಿ ಅವರು ತಾಲಿಬಾನ್‍ ಹೊರತಾದ ಎಲ್ಲ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದರು. ಇದರ ಭಾಗವಾಗಿ ಮೂರ್ತಿ ಧ್ವಂಸಗೊಳಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆಯೂ ಬಮಿಯಾನ್‍ ಪ್ರಾಂತ್ಯದಲ್ಲಿ ತಾಲಿಬಾನ್‍ಗಳು ಬುದ್ಧನ ವಿಗ್ರಹಗಳನ್ನು ವಿರೂಪಗೊಳಿದ್ದರು ಎಂಬದು ಮಾಧ್ಯಮಗಳಿಂದ ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು